ಬೆಂಗಳೂರಿನಲ್ಲಿ ಲಾರಿ ಡಿಕ್ಕಿಯಾಗಿ ಬಿಎಂಟಿಸಿ ಕಂಡಕ್ಟರ್ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬೆಂಗಳೂರಿನ ಪೀಣ್ಯದಲ್ಲಿ ಬಸ್ ರಿವರ್ಸ್ ತೆಗೆದುಕೊಳ್ಳುವಾಗ ಕಂಡಕ್ಟರ್ ಶಿವಲಿಂಗಯ್ಯ ಕೆಳಕ್ಕಿಳಿದು ಚಾಲಕನಿಗೆ ನಿರ್ದೇಶನ ನೀಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಲಾರಿ ಡಿಕ್ಕಿಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿಯನ್ನು ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಾಜಿ ಯೋಧರಾಗಿದ್ದ ಶಿವಲಿಂಗಯ್ಯ ಮಿಲಿಟರಿಯಲ್ಲಿ ಸ್ವಯಂ ನಿವೃತ್ತಿ ತೆಗೆದುಕೊಂಡು ಬಿಎಂಟಿಸಿ ನಿರ್ವಾಹಕರಾಗಿ ಸೇವೆಸಲ್ಲಿಸುತ್ತಿದ್ದರು.
ಲಾರಿ ಚಾಲಕ ಪರಾರಿಯಾಗಿರುವುದರಿಂದ ಪೊಲೀಸರು ಲಾರಿಯ ನಂಬರ್ ಪ್ಲೇಟ್ ಆಧರಿಸಿ ಚಾಲಕನ ಶೋಧ ನಡೆಸಿದ್ದಾರೆ.