Select Your Language

Notifications

webdunia
webdunia
webdunia
webdunia

ನಾಡಿನಾದ್ಯಂತ ಸಂಭ್ರಮ, ಸಡಗರದ ಗೌರಿ, ಗಣೇಶ ಹಬ್ಬ

ನಾಡಿನಾದ್ಯಂತ ಸಂಭ್ರಮ, ಸಡಗರದ ಗೌರಿ, ಗಣೇಶ ಹಬ್ಬ
ಬೆಂಗಳೂರು , ಭಾನುವಾರ, 4 ಸೆಪ್ಟಂಬರ್ 2016 (11:23 IST)
ನಾಡಿನಾದ್ಯಂತ ಗೌರಿ, ಗಣೇಶ ಹಬ್ಬದ ಸಂಭ್ರಮ, ಸಡಗರಗಳು ಮನೆಮಾಡಿದೆ.  ಮನೆ, ಮನೆಗಳಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿದ್ದಾರೆ. ಗೌರಿ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಬಾಗಿನ ಸಿದ್ದಪಡಿಸಿ,  ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರು ದೇವರಿಗೆ ಬಾಗೀನ ಅರ್ಪಿಸಿದರು.ಗೌರಿ ಗಣೇಶ್ ಹಬ್ಬಕ್ಕೆ ಹೂವು, ಹಣ್ಣು ಖರೀದಿಗೆ ತೆರಳಿದ ಗ್ರಾಹಕರಿಗೆ ಹಬ್ಬದ ಬಿಸಿ ತಟ್ಟಿದೆ. ಹೂವು, ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ.

ಗೌರಿ, ಗಣೇಶ ಹಬ್ಬಕ್ಕೆ ತಮ್ಮ ಹುಟ್ಟಿದೂರಿಗೆ ತೆರಳುವ ಮಂದಿಗೆ ಕೂಡ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದ ದರ ಏರಿಕೆಯ ಬಿಸಿ ತಟ್ಟಿದೆ. ಎಂದಿನ ದರಕ್ಕಿಂತ ಪ್ರಯಾಣ ದರವನ್ನು ಏರಿಸಿರುವುದು ಅವರನ್ನು ಹುಬ್ಬೇರಿಸುವಂತೆ ಮಾಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಟಿಕನ್ ಸಮಾರಂಭದಲ್ಲಿ ಮದರ್ ತೆರೇಸಾಗೆ ಸಂತ ಪದವಿ