Select Your Language

Notifications

webdunia
webdunia
webdunia
webdunia

ವ್ಯಾಟಿಕನ್ ಸಮಾರಂಭದಲ್ಲಿ ಮದರ್ ತೆರೇಸಾಗೆ ಸಂತ ಪದವಿ

ವ್ಯಾಟಿಕನ್ ಸಮಾರಂಭದಲ್ಲಿ ಮದರ್ ತೆರೇಸಾಗೆ ಸಂತ ಪದವಿ
ವ್ಯಾಟಿಕನ್: , ಭಾನುವಾರ, 4 ಸೆಪ್ಟಂಬರ್ 2016 (10:54 IST)
ಬಡವರ, ದೀನ ದಲಿತರ ಸೇವೆಗೆ ಜೀವನ್ನು ಮುಡುಪಾಗಿಟ್ಟಿದ್ದ ಕ್ರೈಸ್ತ ಸನ್ಯಾಸಿನಿ ಮದರ್ ತೆರೇಸಾ ಅವರಿಗೆ ವ್ಯಾಟಿಕನ್‌ನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಸಂತ ಪದವಿಯನ್ನು ಘೋಷಿಸಲಾಗುತ್ತದೆ. ಸಂತ ಪದವಿ ನೀಡುವ ಸಮಾರಂಭವನ್ನು ಪೋಪ್ ಫ್ರಾನ್ಸಿಸ್ ನಿರ್ವಹಿಸುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇಂಟ್ ಪೀಟರ್ಸ್ ಚೌಕದಲ್ಲಿ ನೆರೆಯುವರೆಂದು ನಿರೀಕ್ಷಿಸಲಾಗಿದೆ.
 
ಮದರ್ ತೆರೇಸಾ  1997ರಲ್ಲಿ ನಿಧನರಾದ ಬಳಿಕ ಇಬ್ಬರು ರೋಗಪೀಡಿತರು ಪವಾಡಸದೃಶರೀತಿಯಲ್ಲಿ ಬದುಕುಳಿದಿದ್ದರಿಂದ ತೆರೇಸಾಗೆ ಸಂತ ಪದವಿ ನೀಡಲು ತೀರ್ಮಾನಿಸಲಾಯಿತು.
 
ಭಾರತದಲ್ಲಿ ಕೂಡ ಕೋಲ್ಕತಾದ ಮಿಷನರೀಸ್ ಆಫ್ ಚಾರಿಟಿಯಲ್ಲಿ ಸಮಾರಂಭಗಳು ನಡೆಯಲಿವೆ.  ಪೋಪ್ ಫ್ರಾನ್ಸಿಸ್ ಅವರು ಸಾಮೂಹಿಕ ಪ್ರಾರ್ಥನೆ ಮತ್ತು ಸಂತ ಪದವಿ ನೀಡುವ ಸಮಾರಂಭ ಸ್ಥಳೀಯ ಕಾಲಮಾನ 10.30ಕ್ಕೆ ಜರುಗುತ್ತದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಯೋಗ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವ್ಯಾಟಿಕನ್ ತಲುಪಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಇಟಲಿ ಭೂಕಂಪದಿಂದ ಪವಾಡಸದೃಶ ರೀತಿಯಲ್ಲಿ ಬದುಕುಳಿದ ರೋಮಿಯೊ