Select Your Language

Notifications

webdunia
webdunia
webdunia
webdunia

ರಂಗೇರಿದ ಲೋಕಸಭೆ ಚುನಾವಣೆ: ಬಿಜೆಪಿಯಿಂದ ನೋ ಮೈಕ್, ನೋ ಚೇರ್ಸ್ ಪ್ರಚಾರಾಭಿಯಾನ!

ರಂಗೇರಿದ ಲೋಕಸಭೆ ಚುನಾವಣೆ: ಬಿಜೆಪಿಯಿಂದ ನೋ ಮೈಕ್, ನೋ ಚೇರ್ಸ್ ಪ್ರಚಾರಾಭಿಯಾನ!

Sampriya

ಬೆಂಗಳೂರು , ಗುರುವಾರ, 21 ಮಾರ್ಚ್ 2024 (10:10 IST)
ಬೆಂಗಳೂರು: ದಿನದಿಂದ ದಿನಕ್ಕೆ ಲೋಕಸಭೆ ಚುನಾವಣಾ ಕಣ ರಂಗೇರುತ್ತಿದೆ. ಈ ಮಧ್ಯೆ ಚುನಾವಣೆ  ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಸಣ್ಣಮಟ್ಟಿನ ಜನ ಸಮುದಾಯವನ್ನು ತಲುಪಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ನೋ ಮೈಕ್, ನೋ ಚೇರ್ಸ್ ಅಭಿಯಾನ ಹಾಕಿಕೊಂಡಿದೆ.

ತಳಮಟ್ಟದಲ್ಲಿ ಮತದಾರರನ್ನು ತಲುಪುವ ಉದ್ದೇಶದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಏಪ್ರಿಲ್ 5ರ ಒಳಗೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಚುನಾವಣಾ ಪ್ರಚಾರ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಸ್ತೆ ಬದಿಗಳಲ್ಲಿ, ಸಣ್ಣಪುಟ್ಟ ಹಳ್ಳಿಗಳ ಮರಗಳ ಅಡಿಯಲ್ಲಿ ಅಥವಾ ಮನೆಗಳಲ್ಲಿ ಈ ಅಭಿಯಾನದಡಿ ಚುನಾವಣಾ ಪ್ರಚಾರ ನಡೆಸಲಾಗುತ್ತದೆ. ಒಂದು ಬಾರಿಯ ಸಭೆಯ ವೇಳೆ ಸುಮಾರು ನೂರು ಜನರನ್ನು ತಲುಪುವ ಗುರಿ ಹೊಂದಲಾಗಿದೆ. ‌ಬೃಹತ್‌ ರ‍್ಯಾಲಿಗಳನ್ನು ನಡೆಸುವ ಬದಲು ಸಣ್ಣಪುಟ್ಟ ಸಭೆಗಳನ್ನು ನಡೆಸುವ ಮೂಲಕ ಜನರನ್ನು ತಲುಪುವುದು ಉತ್ತಮ ವಿಧಾನವಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ನಾವು ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಸಣ್ಣ ಮಟ್ಟದ ಸ್ಥಳೀಯ ಚುನಾವಣಾ ಪ್ರಚಾರ ಸಭೆಗಳಿಗೆ ಪಕ್ಷದ ರಾಜ್ಯ ಘಟಕವು 22 ವಿವಿಧ ಘಟಕಗಳನ್ನು ಸ್ಥಾಪಿಸಿದೆ. ಇದರಲ್ಲಿ ರೈತರು, ವಕೀಲರು, ವೈದ್ಯರು ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳು ಸೇರಿದ್ದಾರೆ. ಸ್ಥಳೀಯ ನಾಯಕರ ಸಹಕಾರದೊಂದಿಗೆ ಈ ಹೊಸ ಪ್ರಚಾರದ ಪರಿಕಲ್ಪನೆಯನ್ನು ನಾವು ಸಾಕಾರ ಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಉಜ್ವಲ, ಜಲಜೀವನ್ ಮಿಷನ್ ಹಾಗೂ ಇತರ ಯೋಜನೆಗಳನ್ನು ಮುಂದಿಟ್ಟುಕೊಂಡು ಮಹಿಳಾ ಮತದಾರರ ಬಳಿ ಮತಯಾಚನೆ ಮಾಡಲು ನಿರ್ಧರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಎಂಕೆಯಿಂದ ಅಮಾನತುಗೊಂಡಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ಗೆ ಸೇರ್ಪಡೆ