Publish Date: Fri, 07 Jan 2022 (14:03 IST)
Updated Date: Fri, 07 Jan 2022 (21:03 IST)
ಬೆಂಗಳೂರು : ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಪರಿಹಾರ ಅಲ್ಲ. ಹೀಗಾಗಿ ಮತ್ತೆ ಸಂಪೂರ್ಣ ಲಾಕ್ಡೌನ್ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಲಾಕ್ಡೌನ್ ಸ್ಪಷ್ಟತೆಯೇ ಇಲ್ಲ. ಮುಖ್ಯಮಂತ್ರಿಗಳಿಗೆ ಅಷ್ಟು ಸ್ಪಷ್ಟತೆ ಇದೆ. ಸೋಂಕು ಹಬ್ಬಿಯೇ ಹಬ್ಬುತ್ತೆ, ತಡೆಯಲು ಆಗಲ್ಲ. ಸೋಂಕು ಹೆಚ್ಚು ಆಗಿಯೇ ಆಗುತ್ತೆ. ಯಾರೂ ಕೂಡಾ ಪಾಸಿಟಿವಿಟಿ ಬಗ್ಗೆ ಚಿಂತೆ ಬೇಡ ಎಂದರು.
ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಕೊರೊನಾ ಕೇಸ್ ಜಾಸ್ತಿ ಆಗ್ತಿದೆ. ಇನ್ನೂ ಕೇಸ್ ಜಾಸ್ತಿ ಆಗುತ್ತೆ. ಇದು ವಿಶ್ವವ್ಯಾಪಿ ಹರಡಿರುವ ರೋಗ ಆಗಿದೆ.
ನಮ್ಮಲ್ಲಿ ಅಂತರಾಷ್ಟ್ರೀಯ ವಿಮಾನ ಬಂದ್ ಆಗಿಲ್ಲ. ಹೀಗಾಗಿ ಹೊರಗಿನವರ ಓಡಾಟ ಹೆಚ್ಚಾಗಿ ಇರುತ್ತೆ. ಹೀಗಿದ್ದರೂ ನಾವು ಕೊರೊನಾ ನಿಯಂತ್ರಣ ಮಾಡಲು ಅವಕಾಶ ಇದೆ. ಇದಕ್ಕೆ ಜನರ ಸಹಕಾರ ಪಡೆದು ಮುಂದೆವರಿಯುತ್ತೇವೆ ಎಂದು ಹೇಳಿದರು.
Ramya kosira
Publish Date: Fri, 07 Jan 2022 (14:03 IST)
Updated Date: Fri, 07 Jan 2022 (21:03 IST)