Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಎರಡೇ ದಿನಕ್ಕೆ 7.96 ಲಕ್ಷ ಮಕ್ಕಳಿಗೆ ಲಸಿಕೆ: ಸಚಿವ ಡಾ.ಕೆ. ಸುಧಾಕರ್

webdunia
bangalore , ಬುಧವಾರ, 5 ಜನವರಿ 2022 (20:57 IST)
ರಾಜ್ಯದಲ್ಲಿ ಜ.3ರಿಂದ ಪ್ರಾರಂಭವಾದ 15-18 ವರ್ಷದೊಳಗಿನ ಮಕ್ಕಳ ಲಸಿಕೀಕರಣ ಅಭಿಯಾನ ವೇಗಗತಿಯಲ್ಲಿ ಸಾಗುತ್ತಿದ್ದು, ಎರಡೇ ದಿನದಲ್ಲಿ 7.96 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಕೆ. ಸುಧಾಕರ್‌, ನಾವು ರಾಜ್ಯದಲ್ಲಿ 7.96 ಲಕ್ಷ ಮಕ್ಕಳಿಗೆ ಕೇವಲ ಎರಡು ದಿನಗಳಲ್ಲಿ ಲಸಿಕೆ ನೀಡಿದ್ದೇವೆ. ಒಟ್ಟು 31 ಲಕ್ಷ ಮಕ್ಕಳ ಪೈಕಿ ಶೇ.31ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಮುಂದಿನ 10 ದಿನಗಳಲ್ಲಿ ಎಲ್ಲಾ 31 ಲಕ್ಷ ಮಕ್ಕಳಿಗೂ ಲಸಿಕೆ ನೀಡುವ ಮೂಲಕ ಅಭಿಯಾನವನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಲಸಿಕೀಕರಣ ಭರದಿಂದ ಸಾಗುತ್ತಿದ್ದರೂ ಕೂಡ ಕೋವಿಡ್‌ ಹಾಗೂ ರೂಪಾಂತರಿ ಸೋಂಕು ಒಮಿಕ್ರಾನ್‌ ನ ಹಾವಳಿ ಹೆಚ್ಚಾಗಿದೆ. ನಿನ್ನೆ 149 ಹೊಸ ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ.
ಈ ನಿಟ್ಟಿನಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ, ವೀಕ್‌ ಎಂಡ್‌ ಕರ್ಫ್ಯೂ, ನೈಟ್‌ ಕರ್ಫ್ಯೂ ಸೇರಿದಂತೆ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಜ್ಞರ ಸಲಹೆಯಂತೆ ವೀಕೆಂಡ್‌ ಕರ್ಫ್ಯೂ,ರಾಜಕೀಯ ಉದ್ದೇಶವಿಲ್ಲ:ಆರಗ ಜ್ಞಾನೇಂದ್ರ