Publish Date: Thu, 09 Apr 2020 (09:14 IST)
Updated Date: Thu, 09 Apr 2020 (09:15 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಸರ್ಕಾರವೇನೋ 21 ದಿನಗಳ ಬಳಿಕವೂ ಲಾಕ್ ಡೌನ್ ಮುಂದುವರಿಸುವ ಯೋಚನೆಯಲ್ಲಿದೆ. ಆದರೆ ದಿನ ಕಳೆದಂತೆ ನಿಯಂತ್ರಣ ಮಾಡುವುದೂ ಕಷ್ಟವಾಗಲಿದೆ.
ಈಗಾಗಲೇ ಮೂರು ವಾರಗಳಿಂದ ಮನೆಯಲ್ಲೇ ಕುಳಿತು ಜನ ಬೇಸತ್ತಿದ್ದಾರೆ. ರೋಗ ನಿಯಂತ್ರಿಸಲು ಇದು ಅನಿವಾರ್ಯ ಎಂದು ಸರ್ಕಾರ ಎಷ್ಟೇ ಹೇಳಿದರೂ ಮನೆಯೊಳಗೇ ಕೂರಲಾಗದೇ ಜನ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಬೀದಿಗಿಳಿಯುತ್ತಿದ್ದಾರೆ.
ಒಂದು ವೇಳೆ ಮುಂದಿನ ವಾರ ಲಾಕ್ ಡೌನ್ ವಿಸ್ತರಿಸುವ ಆದೇಶ ಕೇಂದ್ರ ಮಾಡಿದರೂ ಅದನ್ನು ಪಾಲಿಸುವವರ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗಲಿದೆ. ಇದು ಸರ್ಕಾರಕ್ಕೆ ಮತ್ತಷ್ಟು ಸವಾಲಾಗುವ ಸಾಧ‍್ಯತೆಯಿದೆ.