Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಲ್ಲಿ ಎಪಿಎಂಸಿಗೆ ಬಂದ ಸಚಿವ

ಸಹಕಾರ ಸಚಿವ
ಬೆಂಗಳೂರು , ಬುಧವಾರ, 8 ಏಪ್ರಿಲ್ 2020 (19:38 IST)
ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಸಚಿವರೊಬ್ಬರು ಎಪಿಎಂಸಿಗೆ ಭೇಟಿ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಎಪಿಎಂಸಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಹಾಗೂ ಖರೀದಿ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಪ್ ಕಾಮ್ಸ್ ಮೂಲಕ ಖರೀದಿ ಮಾಡಿ, ಬೆಂಗಳೂರಿನ ಬಡಾವಣೆ ಹಾಗೂ ಅಪಾರ್ಟ್ ಮೆಂಟ್ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಕೃಷಿ, ತೋಟಗಾರಿಕೆ ಹಾಗೂ ಸಹಕಾರ ಇಲಾಖೆಗಳು ಪರಸ್ಪರ ಸಮಾಲೋಚನೆಗಳನ್ನು ಮಾಡುವ ಮೂಲಕ ರೈತರ ಹಾಗೂ ವರ್ತಕರ ಸಮಸ್ಯೆಗಳನ್ನು ಬಗೆ ಹರಿಸುತ್ತಿವೆ ಎಂದರು. ಉಚಿತವಾಗಿ ಹಾಲು ವಿತರಿಸಲು ಸರ್ಕಾರ ಹಾಲು ಒಕ್ಕೂಟಕ್ಕೆ 38 ಕೋಟಿ ರೂ ಅನುದಾನ ನೀಡಿದ್ದು, ನಿತ್ಯ 7 ಲಕ್ಷ ಲೀಟರ್ ಹಾಲು ಹಂಚಿಕೆ ಮಾಡಲಾಗುತ್ತಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಈಗ್ಲೇ ಹಾಪ್ ಕಾಮ್ಸ್ ಶುರು ಮಾಡಿ ಎಂದ ಸಚಿವ