Publish Date: Wed, 08 Nov 2017 (08:59 IST)
Updated Date: Wed, 08 Nov 2017 (09:02 IST)
ಬೆಂಗಳೂರು: ಅನಿಯಮಿತ ವಿದ್ಯುತ್ ಕಡಿತ ಮಾಡುವುದಾಗಿ ಬೆಸ್ಕಾಂ ಪತ್ರದಲ್ಲಿ ತಿಳಿಸಿದ್ದು, ಮಳೆಗಾಲ ಮುಗಿಯುವ ಮುನ್ನವೇ ರಾಜಕ್ಕೆ ವಿದ್ಯುತ್ ಬರ ಆವರಿಸಿದೆ.
ರಾಜ್ಯದಲ್ಲಿ ಜನರಿಗೆ ಕತ್ತಲೆ ಭಾಗ್ಯ ಸಿಕ್ಕಿದೆ. ಬೇಸಿಗೆಯಲ್ಲಿ ಆರಂಭವಾಗುವ ಲೋಡ್ ಶೆಡ್ಡಿಂಗ್ ಮಳೆಗಾಲ ಮುಗಿಯುವ ಮುನ್ನವೇ ಶುರುವಾಗಿದೆ. ಯುಪಿಎಸ್‍ಎಲ್, ಆರ್ ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಬೆಸ್ಕಾಂ ಐಇಎಕ್ಸ್ ನಿಂದ ವಿದ್ಯುತ್ ಖರೀದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಈಗಾಗಲೇ ಶುರುವಾಗಿದ್ದು ದಿನಕ್ಕೆ ಹತ್ತು ಗಂಟೆ ವಿದ್ಯುತ್ ಸಿಕ್ಕರೆ ಹೆಚ್ಚು ಎನ್ನುವಂತಾಗಿದೆ. ಆದರೆ ಈ ವಿದ್ಯುತ್ ಸಮಸ್ಯೆ ಎಂದು ಬಗೆಹರಿಯಲಿದೆ ಎನ್ನುವುದರ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿಲ್ಲ.