Select Your Language

Notifications

webdunia
webdunia
webdunia
webdunia

ಚಾಮರಾಜನಗರದಲ್ಲಿ ಲಘು ವಿಮಾನ ಪತನ

ಚಾಮರಾಜನಗರ
ಚಾಮರಾಜನಗರ , ಶುಕ್ರವಾರ, 2 ಜೂನ್ 2023 (10:26 IST)
ಚಾಮರಾಜನಗರ : ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಇಂದು(ಜೂನ್ 1) ಚಾಮರಾಜನಗರ ತಾಲೂಕಿನ ಭೋಗಪುರ ಬಳಿ ನಡೆದಿದೆ.

ವಿಮಾನದಲ್ಲಿದ್ದ ಇಬ್ಬರು ಪ್ಯಾರಾಚೂಟ್ ಮೂಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. 

ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ನಿಂದ ತೆರಳಿದ್ದ ವಿಮಾನ, ಭೋಗಪುರ ಬಳಿ ಪತಗೊಂಡಿದೆ. ಇನ್ನು ವಿಮಾನ ಛಿದ್ರ ಛಿದ್ರವಾಗಿದ್ದು, ಅದರ ಬಿಡಿ ಭಾಗಗಗಳು ಎಲ್ಲೊಂದರಲ್ಲಿ ಬಿದ್ದಿವೆ. ಇನ್ನು  ಕೆಲ ಭಾಗಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿವೆ.

ಎಚ್ ಎ ಎಲ್ ನಿಂದ ಬಂದಿದ್ದ ತರಬೇತಿ ಪೈಲಟ್ಗಳಾದ ಉತ್ತರ ಭಾರತ ಮೂಲದ ತೇಜಪಾಲ್ (43) ಹಾಗು ಭೂಮಿಕಾ (30) ಸಣ್ಣಪುಟ್ಟ ಗಾಯಗಳಾಗಿವೆ. ಪೈಲಟ್ ತರಬೇತಿಗಾಗಿ ಬೆಂಗಳೂರಿನ ಎಚ್ ಎಎಲ್ನಿಂದ ಚಾಮರಾಜನಗರಕ್ಕೆ ಬಂದಿದ್ದರು. ಬಳಿಕ ಇಲ್ಲಿಂದ ವಾಪಸ್ ಆಗುತ್ತಿದ್ದಾಗ ಕಿರು ವಿಮಾನ ನೆಲಕ್ಕೆ ಅಪ್ಪಳಿಸಿದೆ. ಸದ್ಯ ಪೈಲಟ್ ಗಳಿಗೆ ಹೆಚ್ಚಿನ ಚಿಕಿತ್ಸೆಗಅಗಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ ತಿಂಗಳಿನಲ್ಲಿ ಕರ್ನಾಟಕದ ಜಿಎಸ್‌ಟಿ ಪಾಲು ಎಷ್ಟು?