Publish Date: Wed, 05 Jul 2023 (14:18 IST)
Updated Date: Wed, 05 Jul 2023 (14:22 IST)
ವಾಣಿಜ್ಯ ಗ್ಯಾಸ್ ಬೆಲೆ ಹಾಗೂ ವಾಣಿಜ್ಯ ಗ್ಯಾಸ್ ಮೇಲಿರುವ ಜಿಎಸ್‌ಟಿಯನ್ನು ಕಡಿತಗೊಳಿಸುವಂತೆ, ಬೆಂಗಳೂರು ಹೋಟೆಲ್ ಮಾಲೀಕರ ಅಸೋಸಿಯೇಷನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದು ಹೋಟೆಲ್ ಮಾಲೀಕರ ಅಸೋಸಿಯೇಷನ್ ಮನವಿ ಮಾಡಿದೆ. ಇನ್ನು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರದ ಮೂಲಕ ಆಗ್ರಹಿಸಿದೆ.. ಈಗಾಗಲೇ ವಾಣಿಜ್ಯ ಗ್ಯಾಸ್ ಬೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ 80 ರೂಪಾಯಿಗಳಷ್ಟು ಕಡಿಮೆಯಾಗಿದೆ.. ಆದರೆ ಜುಲೈ ತಿಂಗಳಲ್ಲಿ ದೇಶದಲ್ಲಿ ಬೆಲೆ ಅಪ್ಲೈ ಆಗಿಲ್ಲ, ಅದನ್ನು ಅಪ್ಲೈ ಮಾಡುವಂತೆ ಮನವಿ ಮಾಡಲಾಗಿದೆ. ವಾಣಿಜ್ಯ ಗ್ಯಾಸ್ ಮೇಲೆ 18% ಜಿಎಸ್ಟಿಯನ್ನ ಹಾಕಲಾಗುತ್ತದೆ. ಇದಕ್ಕೆ ಶೇ 5ರಷ್ಟು ಜಿಎಸ್‌ಟಿಯನ್ನು ಹೇರುವಂತೆ ಮನವಿ ಮಾಡಲಾಗಿದೆ