Select Your Language

Notifications

webdunia
webdunia
webdunia
webdunia

ನಿಮ್ಮ ಅಂಚೆ ಜೀವ ವಿಮೆ ರಿನಿವಲ್ ಗೆ ಅವಕಾಶ

ಅಂಚೆ ಕಚೇರಿ
ಲಾಕ್ ಡೌನ್ ಸಮಯದಲ್ಲಿ ಅಂಚೆ ಕಚೇರಿ ಗ್ರಾಹಕರ ಜೀವ ವಿಮೆ ಪುನರುಜ್ಜೀವನಗೊಳಿಸಲು ಅವಕಾಶ ಕಲ್ಪಿಸಿದೆ.

ಅಂಚೆ ಜೀವ ವಿಮಾ ನಿಯಮ 2011 ರ ತಿದ್ದುಪಡಿ ಪ್ರಕಾರ, ಪಾಲಿಸಿಗಳು 5 ವರ್ಷಕ್ಕಿಂತ ಹೆಚ್ಚು ಕಾಲ ಪ್ರೀಮಿಯಂ ಕಟ್ಟದೇ ಇದ್ದ ಪಕ್ಷದಲ್ಲಿ ಆ ಪಾಲಿಸಿಯನ್ನು ಪುನರುಜ್ಜೀವನಗೊಳಿಸಲು ಮೇ 31 ರ ನಂತರ ಯಾವುದೇ ಅವಕಾಶಗಳಿರುವುದಿಲ್ಲ.

5 ವರ್ಷಕ್ಕಿಂತ ಜಾಸ್ತಿ ಸಮಯ ಕಟ್ಟದೇ ಇರುವ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು , ಮೇ 31 ರ ಒಳಗಾಗಿ ಉತ್ತಮ ಆರೋಗ್ಯದ ಆರೋಗ್ಯ ಪತ್ರವನ್ನು ಹತ್ತಿರದ ಅಂಚೆ ಕಚೇರಿಯಲ್ಲಿ ನೀಡಬೇಕು. ಆ ಮೂಲಕ ಪಾಲಿಸಿಯ ಸೌಲಭ್ಯವನ್ನು ಪಡೆಯಬಹುದು.

ಇಲ್ಲದಿದ್ದಲ್ಲಿ ಮೇ 31 ರ ನಂತರ ಇಂತಹ ಪಾಲಿಸಿಗಳು ರದ್ದುಗೊಳ್ಳುತ್ತವೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ತಿಳಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೇ 3 ರವರೆಗೂ ಸೀಲ್ ಡೌನ್ ಎಂದ ಸಚಿವ