ಕನ್ನಡ ಕರ್ನಾಟಕದ ರಾಜ್ಯ ಭಾಷೆ, ಕನ್ನಡಿಗರ ಮಾತೃಭಾಷೆ. ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಆಡಳಿತ ಭಾಷೆಯೂ ಕನ್ನಡ. ಕನ್ನಡದ ಬಗ್ಗೆ ಅಭಿಮಾನದಿಂದ ನಿತ್ಯವೂ ಕನ್ನಡವನ್ನು ಹೆಚ್ಚು ಬಳಕೆ ಮಾಡುವುದರಿಂದ, ಕನ್ನಡದಲ್ಲೇ ವ್ಯವಹರಿಸುವುದರಿಂದ ಕನ್ನಡೇತರರೂ ಕನ್ನಡ ಕಲಿತು ಕನ್ನಡಿಗರಾಗುತ್ತಾರೆ. ಇದರಿಂದ ಭಾಷೆ ಬೆಳೆಯುತ್ತದೆ. ಅನಿವಾರ್ಯವಾದಾಗ ಮಾತ್ರ ಬೇರೆ ಭಾಷೆಯಲ್ಲಿ ವ್ಯವಹರಿಸಬೇಕು CM ಸಿದ್ರಾಮಯ್ಯ ಹೇಳಿದ್ದಾರೆ