ಕೇಂದ್ರದ ಸರಕಾರ ಕೊಟ್ಟಂತಹ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕೆಂದು ಉಡುಪಿಯ ಪೇಜಾವರ ಶ್ರೀಗಳಾದ ಶ್ರೀ ವಿಶ್ವಪ್ರಸನ್ನತೀಥ೯ ಸ್ವಾಮೀಜಿ ಹೇಳಿದರು.
ಅವರು ನಗರದ ಶ್ರೀ ಕೃಷ್ಣ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಕೇಂದ್ರದ ಸರಕಾರ ಹತ್ತು ಪಸೇ೯ಂಟ್ ಮೀಸಲಾತಿಯನ್ನು ಆಥಿ೯ಕವಾಗಿ ಹಿಂದುಳಿದವರಿಗೆ ನೀಡಿದೆ. ಆದರೆ ರಾಜ್ಯ ಸರ್ಕಾರ ಅದನ್ನು ರಾಜ್ಯದಲ್ಲಿ ಇಲ್ಲಿಯವರೆಗೆ ಜಾರಿ ಮಾಡಿಲ್ಲ ಎಂದರು.
ರಾಜ್ಯ ಸರ್ಕಾರ ಈ ಮೀಸಲಾತಿ ಜಾರಿಗೆ ಮಾಡದೇ ಇರುವುದು ವ್ಯವಸ್ಥೆ ಗೆ ತಂದ ಅಪಕೀತಿ೯ ಎಂದು ನುಡಿದರು.ಗದಗ,ನ ಓವ೯ ವಿದ್ಯಾರ್ಥಿ ಪ್ರಥಮ ರ್ಯಾಂಕ್ ಪಡೆದರು, ಗದಗ,ನ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ನೆಲೆಸಬೇಕು. ಹಿಜಾಬ್ ಪ್ರಕರಣವು ವಿಪರೀತಕ್ಕೆ ಹೋಗಬಾರದು. ಸಮಾಜದಲ್ಲಿ ಭಿನ್ನಾಭಿಪ್ರಾಯವನ್ನು ಬಿಟ್ಟು ಎಲ್ಲರೂ ಒಗ್ಗೂಡಿ ಹೋಗಬೇಕು. ಈ ಪ್ರಕರಣವು ನ್ಯಾಯಾಲಯದಲ್ಲಿ ಇರುವದರಿಂದ ಇದರ ಬಗ್ಗೆ ಹೆಚ್ಚಾಗಿ ಎನೂ ಮಾತನಾಡಲಾರೆ ಎಂದ ಅವರು, ನ್ಯಾಯಾಲಯದ ತೀಪ೯ನ್ನು ಯಾರು ಸಹ ಉಲ್ಲಂಘಿಸಬಾರದು ಎಂದು ನುಡಿದರು.
ಕೋಟ೯ ವಸ್ತ್ರ ಸಂಹಿತೆ ವಿಚಾರದಲ್ಲಿ ಮಾತ್ರ ಮಧ್ಯಂತರ ಮೌಖಿಕ ಆದೇಶವನ್ನು ನೀಡಿದೆ. ಅದನ್ನು ನಾವೆಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಘವೇಂದ್ರ ಕುಲಕರ್ಣಿ ಸೇರಿದಂತೆ ಶ್ರೀ ಕೃಷ್ಣ ಮಠದ ಭಕ್ತವೃಂದ ಉಪಸ್ಥಿತರಿದ್ದರು.