ಒಂದೇ ರಾಜ್ಯದಲ್ಲಿ ನಮಗೆ ಬೇಕಾದಷ್ಟು ಅಕ್ಕಿ ಸಿಗಲ್ಲ.ಎರಡ್ಮೂರು ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತೇವೆ.ಅಕ್ಕಿ ಖರೀದಿಗೆ ಒಂದು ಪಾಲಿಸಿ ಇದೆ.ಆ ಪಾಲಿಸಿ ಪ್ರಕಾರವೇ ಕೇಂದ್ರ ಖರೀದಿ ಮಾಡುತ್ತೆ.ಹಾಗಾಗಿ ಅದೆ ಮಾದರಿಯನ್ನು ನಾವು ಅನುಸರಿಸುತ್ತವೆ.ಹಣಕಾಸು ಹೆಚ್ಚಾಗದ ಹಾಗೆ ನಡೆ ಅನುಸರಿಸುತ್ತೇವೆ.ನಮ್ಮ ಹೈಕಮಾಂಡ್ ಭೇಟಿ ಮಾಡಲು ಸಚಿವ ನಿಯೋಗ ಹೋಗುತ್ತಿದ್ದೇವೆ.ಅವರ ಜೊತೆ ಚರ್ಚೆ ಮಾಡುತ್ತೇವೆ.ದೆಹಲಿ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ.ಹೈಕಮಾಂಡ್ ಸಲಹೆ ಸೂಚನೆಗಳನ್ನು ಪಡೆದುಕೊಂಡು ಬರುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ನಿಯೋಗ ಕೇಂದ್ರಕ್ಕೆ ಹೋಗುವ ಎಂಬ ವಿಚಾರವಾಗಿ ಪಾರ್ಟಿ ಅಧ್ಯಕ್ಷ ಖರ್ಗೆ ಅವರು 21 ತಾರಿಕು ನಮ್ಮನ್ನ ಕರೆದಿದ್ದಾರೆ.ರಾಹುಲ್ ಗಾಂಧಿ ಅವರು ಕರೆದಿದ್ದಾರೆ ನಾವು ಹೊಗ್ತಾಯಿದ್ದೇವೆ .ಆ ಸಂದರ್ಭದಲ್ಲಿ ಕೆಲವು ಮಿನಿಸ್ಟರ್ ಗಳನ್ನ ಭೇಟಿ ಮಾಡಲು ಸಮಾವಕಾಶ ಕೇಳ್ತಾಯಿದ್ದೇವೆ.ರಾಜ್ಯ ಬಿಜೆಪಿ ಸಂಸದರು ಸಹಕಾರ ನಮ್ಮಗೆ ನೀಡಲಿ.ಅವರಿಗೂ ಒಂದು ಕ್ರೆಡಿಟ್ ಹೋಗಲಿ ಅಕ್ಕಿಯನ್ನ ರಾಜ್ಯ ಕೊಡಿಸೆದ್ದೇವೆ ಅನ್ನುವುದು.ಅವರ ಸಹಕಾರವನ್ನು ನಾವು ಕೇಳುತ್ತೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ