ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ಮಾಡಿದ್ದು,ಈ ವೇಳೆ ಮಾತಮಾಡಿದ ಡಿಕೆ ಶಿವಕುಮಾರ್ ನಾನು ಹೆಬ್ಬಾಳ ಮೇಲ್ ಸೇತುವೆ ಕಡೆ ಹೋಗ್ತಾ ಇದ್ದೀನಿ.ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಶಾಶ್ವತವಾಗಿ ಬಗೆಹರಿಸಬೇಕಿದೆ.ಇನ್ನೊಂದು ಬೆಂಗಳೂರು ನಗರದಲ್ಲಿ ಲಾರಿ ಮತ್ತು ಟ್ರಾಕ್ಟರ್ ನಲ್ಲಿ ರಸ್ತೆ ಕಸ ಬದಿಯಲ್ಲಿ ಹಾಕ್ತಾ ಇದ್ದಾರೆ.
ಹೈವೆ,ರೋಡ್ ಪಕ್ಕ ಹಾಕ್ತಾ ಇದ್ದಾರೆ.ವಾರ್ನಿಂಗ್ ಕೊಟ್ಟಿದ್ದೀವಿ, ಕೇಸ್ ಹಾಕಬೇಕು.ಲಾರಿಗಳು, ಟ್ರಾಕ್ಟರ್ ನೋಂದಣಿ ಮಾಡಬೇಕು.ತ್ಯಾಜ್ಯ ತುಂಬುವುದು, ಹಾಕುವುದು ಬಗ್ಗೆ ಲೆಕ್ಕಾಚಾರ ಇಡಬೇಕು.ಬೆಂಗಳೂರು ಸ್ವಚ್ಚತೆ ಕಾಪಾಡಬೇಕು.ಟ್ರಾಫಿಕ್, ಸ್ವಚ್ಚತೆಗೆ ಮೊದಲ ಆದ್ಯತೆ ಕೊಡಲಾಗುತ್ತೆ ಎಂದು ಹೇಳಿದ್ರು.ಅಲ್ಲದೆ ಈ ವೇಳೆ ಬಿಬಿಎಂಪಿ ಚುನಾವಣೆ ಕುರಿತು ಕಾನೂನು ವಿಚಾರಗಳಿವೆ.ಮುಂದೆ ಅದರ ಬಗ್ಗೆ ಮಾತಾನಾಡುತ್ತೇನೆ ಎಂದ ಡಿಕೆಶಿವಕುಮಾರ್ ಹೇಳಿದ್ರು.