Webdunia - Bharat's app for daily news and videos

Install App

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನಕ್ಕೆ ಅಸಮಾಧಾನ

ಕೃಷ್ಣವೇಣಿ ಕೆ
ಮಂಗಳವಾರ, 30 ಜೂನ್ 2026 (15:51 IST)
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಶಾಸಕ ಎಸ್.ರಘು ಅವರು ಆಕ್ಷೇಪಿಸಿದ್ದಾರೆ.
 
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಅನುದಾನ ನೀಡಿದ್ದಾರೆ. ಬಿಜೆಪಿ ಶಾಸಕರಿಗೆ 16 ಕ್ಷೇತ್ರಕ್ಕೆ 40 ಕೋಟಿಯಂತೆ ಕೊಟ್ಟಿದ್ದಾರೆ. ಇವತ್ತು ಆದೇಶ ಸಿಗುತ್ತಿದೆ ಎಂದು ವಿವರಿಸಿದರು. ಸಿದ್ದರಾಮಯ್ಯನವರು ಕಳೆದ ನವೆಂಬರ್‍ನಲ್ಲಿ ಇದ್ದಾಗ ಕೊಟ್ಟ 25 ಕೋಟಿಗೆ ಸಂಬಂಧಿಸಿ ಈಗ ಟೆಂಡರ್ ಆಗುತ್ತಿದೆ ಎಂದರು.
 
ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 700 ಕೋಟಿಯಷ್ಟು ತೆರಿಗೆಯನ್ನು ಜಿಬಿಎಗೆ ತುಂಬಿದ್ದೇವೆ. ಸರಕಾರ ಕೊಡುತ್ತಿರುವ ಅನುದಾನ ಕೇವಲ 65 ಕೋಟಿ. ಅಂದರೆ ಅದು ಶೇ 10ರಷ್ಟು. ಉಳಿದ 90 ಶೇ ಮೊತ್ತ ಸರಕಾರಕ್ಕೆ ಹೋಗುತ್ತಿದೆ ಎಂದು ದೂರಿದರು.
 
2023ರಲ್ಲಿ ಸರಕಾರ ಅಧಿಕಾರ ಸ್ವೀಕರಿಸಿದೆ. ಇದೀಗ ಅನುದಾನ ಸಿಕ್ಕಿದೆ. ಇದು ಏನೇನೂ ಸಾಲದು ಎಂದು ನುಡಿದರು. ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ಸಮಾನ ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ವಿನಂತಿಸಿದರು. ಈ ಬಾರಿ ಮಳೆ ಕಡಿಮೆ ಆಗಿರುವ ಕಾರಣ ನೀರಿನ ಅಭಾವವೂ ಬರಬಹುದು. ಸರಕಾರ ತರಾತುರಿಯಲ್ಲಿದೆ. ಜಿಬಿಎ ಚುನಾವಣೆ ನಡೆಸುವ ಏಕೈಕ ಉದ್ದೇಶದಿಂದ ಅನುದಾನ ಕೊಟ್ಟಿರುವ ಸಾಧ್ಯತೆ ಇದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ತಕ್ಷಣ ಜಿಬಿಎ ಚುನಾವಣೆ ನಡೆಸುವಂತೆ ಅವರು ಆಗ್ರಹಿಸಿದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಪಾಳದ ಪ್ರವಾಹದಲ್ಲಿ ಸಿಲುಕಿರುವ ತಮಿಳರನ್ನು ರಕ್ಷಿಸಲು ಸಿಎಂ ವಿಜಯ್ ಉನ್ನತ ಮಟ್ಟದ ಸಭೆ

ನೇಪಾಳದ ಪ್ರವಾಹದಲ್ಲಿ ಸುಮಾರು 130-140 ಭಾರತೀಯರು ನಾಪತ್ತೆ: ಪ್ರಿಯಾಂಕ್ ಖರ್ಗೆ

ನೇಪಾಳದಿಂದ 21 ಭಾರತೀಯರ ರಕ್ಷಣೆ, ಚೀನಾದಲ್ಲಿ ಸಿಲುಕಿರುವ 200 ಭಾರತೀಯರಿಂದ ರಕ್ಷಣೆಯ ಕೋರಿಕೆ

ಮಳೆಯಿಲ್ಲದೆ ಆತಂಕದಲ್ಲಿರುವ ರೈತರ ಬೆನ್ನಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ: ಡಿಕೆ ಶಿವಕುಮಾರ್‌

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಎಬ್ಬಿಸಿದವರಿಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments