Publish Date: Tue, 30 Jun 2026 (09:48 IST)
Updated Date: Tue, 30 Jun 2026 (09:51 IST)
ಬೆಂಗಳೂರು: ನನ್ನನ್ನು ಕಿಕ್ ಔಟ್ ಮಾಡಿ ಎಂದು ಹೇಳುವಂತಹ ತಪ್ಪು ನಾನೇನು ಮಾಡಿದ್ದೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ಸದಾನಂದ ಗೌಡರದ್ದು ಎನ್ನಲಾದ ಅಡಿಯೋವೊಂದು ವೈರಲ್ ಆಗಿತ್ತು. ಈ ಅಡಿಯೋದಲ್ಲಿ ದಿಲ್ಲಿ ಪ್ರತಿನಿಧಿಯೊಬ್ಬರಿಗೆ ಅಕ್ಟೋಬರ್ ನಲ್ಲಿ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕಿಕ್ ಔಟ್ ಮಾಡಿ ಎನ್ನುತ್ತಾರೆ. ಈ ಅಡಿಯೋ ಈಗ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ.
ಅಡಿಯೋ ವೈರಲ್ ಆದ ಬೆನ್ನಲ್ಲೇ ಸದಾನಂದ ಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಇದು ನನ್ನ ಧ್ವನಿಯಲ್ಲ. ನನ್ನದಲ್ಲದ ಅಡಿಯೋ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದಿದ್ದರು. ಆದರೆ ಇದು ಹೈಕಮಾಂಡ್ ಮಟ್ಟಕ್ಕೆ ತಲುಪಿದೆ.
ಈ ಹಿನ್ನಲೆಯಲ್ಲಿ ಸದಾನಂದ ಗೌಡರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದು ವರಿಷ್ಠರನ್ನು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ. ಇದರ ನಡುವೆ ವಿಜಯೇಂದ್ರ ದೆಹಲಿ ನಾಯಕರ ಜೊತೆ ತಮ್ಮ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ನನ್ನನ್ನು ಕಿಕ್ ಔಟ್ ಮಾಡುವಂತಹ ತಪ್ಪು ನಾನೇನು ಮಾಡಿದ್ದೆ. ಅವರ ಹೇಳಿಕೆ ನನಗೆ ನೋವು ತಂದಿದೆ ಎಂದು ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ