Daily Horoscope

Select Your Language

Notifications

webdunia
webdunia
webdunia
webdunia

ನನ್ನದಲ್ಲದ ಆಡಿಯೋ ಬಗ್ಗೆ ನೋ ಕಾಮೆಂಟ್ಸ್‌, ವಿಜಯೇಂದ್ರ ಕೆಳಗಿಳಿಸುವ ಪ್ಲ್ಯಾನ್ ಆಡಿಯೋ ಬಗ್ಗೆ ಸದಾನಂದ ಗೌಡ

DV Sadananda Gowda
Photo Courtesy X
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು ಕೆಳಗಿಳಿಸುವ ಬಗ್ಗೆ ದೆಹಲಿ ನಾಯಕರಿಗೆ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಒತ್ತಾಯ ಮಾಡಿದ್ದಾರೆನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಕೇಸರಿ ಪಾಳಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ಈ ಸಂಬಂಧ ಸದಾನಂದ ಗೌಡ ಅವರು ಕೂಡಾ ಸ್ಪಷ್ಟನೆಯನ್ನು ನೀಡಿದ್ದಾರೆ.  

ಇದು ಬಿಜೆಪಿ ನಾಯಕರೂ ಆಗಿರುವ ಮಾಜಿ ಸಿಎಂ ಡಿ.ವಿ ಸದಾನಂದ ಗೌಡರು ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ. ಇನ್ನೂ ವೈರಲ್ ಆಡಿಯೋದಲ್ಲಿ  ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನ ಮುಂದುವರಿಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಹೇಳಿ ಒತ್ತಾಯ ಮಾಡಿರುವ ಆಡಿಯೋ ವೈರಲ್ ಆಗಿದೆ. 

ʻನಾನು ಹೇಳೋದು ತಪ್ಪೋ ಸರಿನೋ ಗೊತ್ತಿಲ್ಲ, ನೀವೇ ಹೇಳಬೇಕು. ವಿಜಯೇಂದ್ರ ಅವರ ಅವಧಿ ನವೆಂಬರ್‌ಗೆ ಮುಗಿಯಲಿದೆ. ಈಗಲೇ ಅವರನ್ನು ತೆಗೆದು ಯಾಕೆ ಮತ್ತೊಂದು ಗೊಂದಲ ಸೃಷ್ಟಿ ಮಾಡೋದು? ಅವರ ಅವಧಿ ನವೆಂಬರ್‌ಗೆ ಮುಗಿಯುತ್ತೆ, ಆಗಲೇ ಹುದ್ದೆಯಿಂದ ತೆಗೆದರೆ ಸೂಕ್ತ. ಆಗ ಅವರ ಅವಧಿಯೂ ಮುಗಿದಿರುತ್ತೆ, ಅವನ್ನು ಪದವಿಯಿಂದ ತೆಗೆದರು ಅನ್ನೋ ಆರೋಪವೂ ಬರೋದಿಲ್ಲ. ಪಕ್ಷದ ಒಳಗೂ ಯಾವುದೇ ಗೊಂದಲ ಇರಲ್ಲ, ಅವರನ್ನು ವ್ಯವಸ್ಥಿತವಾಗಿ ಹುದ್ದೆಯಿಂದ ತೆಗೆಯಬೇಕು. ಇನ್ನುಳಿದಿರೋದು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್. ಅಕ್ಟೋಬರ್ ಹೊತ್ತಿಗೆ ವಿಜಯೇಂದ್ರ ಅವರನ್ನು ಕಿಕ್ ಔಟ್ ಮಾಡಿ. ಈಗ ಏನಾದರೂ ಅವರನ್ನು ತೆಗೆದರೆ ಗೊಂದಲ ಆಗುತ್ತೆ, ಅವರ ತಂಡ ಎಚ್ಚೆತ್ತುಕೊಳ್ಳುತ್ತೆ. ಅವರ ಅವಧಿ ಮುಗಿದ ಮೇಲೆ ತೆಗೆದರೆ ಸಮಸ್ಯೆ ಆಗಲ್ಲ ಅನ್ನೋದು ನನ್ನ ಅಭಿಪ್ರಾಯ. ಇದಕ್ಕಿಂತ ಬೇರೆ ಅವಕಾಶ ಇದ್ರೆ ನೋಡಿ, ಹೈಕಮಾಂಡ್ ನಿರ್ಧಾರಕ್ಕೆ ಒಪ್ಕೋತೇವೆ. ವಿಜಯೇಂದ್ರ ತೆಗೆದ ಬಳಿಕ ಯಾರಾದ್ರೂ ಸೂಕ್ತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷರಾಗಿ ಮಾಡಿ ಎಂದು ಹೇಳಿದ್ದಾರೆ. ಇದು ಸದಾನಂದ ಗೌಡರದ್ದು ಆಡಿಯೋ ಎನ್ನಲಾಗಿದೆ. 

ಈ ಸಂಬಂಧ ಬೆಂಗಳೂರಿನಲ್ಲಿ ಸ್ಪಷ್ಟನೆಯನ್ನು ನೀಡಿರುವ ಸದಾನಂದ ಗೌಡ ಅವರು,  ಇದರ ಬಗ್ಗೆ ʻನೋ ಕಾಮೆಂಟ್ಸ್ʼ. ನನ್ನದಲ್ಲದ ಆಡಿಯೋ, ನನ್ನದಲ್ಲದ ವಿಡಿಯೋ ಬಗ್ಗೆ ನಾನು ಮಾತಾಡಲ್ಲ. ನನಗೆ ಈ ಆಡಿಯೋ ಬಗ್ಗೆ ಗೊತ್ತಿಲ್ಲ. ಇದರ ಬಗ್ಗೆ ನೀವೇ ಕಂಡುಹಿಡಿಯಿರಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಲ್ಲಿನ ಮತದಾರರಲ್ಲದವರಿಗೆ ಇನ್ಮುಂದೆ ಗೃಹಜ್ಯೋತಿ ಸೌಲಭ್ಯ ಕಟ್: ಡಿಕೆ ಶಿವಕುಮಾರ್‌