ಶಾಸಕರಿಗೆ ಇದು ಇರಲೇಬೇಕಂತೆ: ಹೀಗಂದೋರು ಯಾರು?

Webdunia
ಸೋಮವಾರ, 8 ಜುಲೈ 2019 (18:29 IST)
ರಾಜಕಾರಣದಲ್ಲಿ ಜನರಿಂದ ಗೆದ್ದಂತಹ ಶಾಸಕರಿಗೆ ಪಕ್ಷ ನಿಷ್ಠೆ ಇರಬೇಕು. ಇತ್ತೀಚಿನ ಈ ಬೆಳವಣಿಗೆಗಳು ಬಹಳ ನೋವು ತರುವಂತಹದ್ದು ಎಂದು ಮಾಜಿ ಸಂಸದ ಹೇಳಿದ್ದಾರೆ.

ಮಾಜಿ ಸಂಸದ ಆರ್.ಧ್ರುವನಾರಾಯಣ್ ಈ ಹೇಳಿಕೆ ನೀಡಿದ್ದಾರೆ. ಹನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಧ್ರುವನಾರಾಯಣ್, ಮೊದಲ ಬಾರಿಗೆ ಗೆದ್ದು ಅಧಿಕಾರಕ್ಕಾಗಿ ಹಪಹಪಿಸುವುದು ಸರಿಯಲ್ಲ.

ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷಕ್ಕೆ ಗೌರವ ಕೊಡಬೇಕು. ಇದರಿಂದ ಜನರಿಗೂ ಸಹ ರಾಜಕಾರಣಿಗಳ ಮೇಲೆ ವಿಶ್ವಾಸ ಇರುತ್ತದೆ.
ಮೂರು- ನಾಲ್ಕು ಬಾರಿ ಗೆದ್ದಿರುವವರಿಗೂ ಅಧಿಕಾರದ ಮೇಲೆ ಆಸೆ ಇರುತ್ತೆ, ಆದ್ರೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದಾರೆ ಎಂದರು. 

ಅನಿಲ್ ಚಿಕ್ಕಮಾದು ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅನಿಲ್ ಚಿಕ್ಕಮಾದು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಅದನ್ನ ಅವರೇ ಸ್ಪಷ್ಟ ಪಡಿಸಿದ್ದಾರೆ. ನಾನು ಕಾಂಗ್ರೆಸ್ ನಿಂದ ಗೆದ್ದಿದ್ದೇನೆ.  ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ ಎಂದಿದ್ದಾರೆ.

ಸರ್ಕಾರ ಉಳಿಯುತ್ತೋ, ಉರುಳುತ್ತೋ ಅದು ಸ್ಪೀಕರ್ ಬಂದ ಮೇಲೆ ಗೊತ್ತಾಗುತ್ತದೆ. ಸ್ಪೀಕರ್  ರವರು ರಾಜೀನಾಮೆಯನ್ನ ಇನ್ನೂ  ಅಂಗೀಕಾರ ಮಾಡಿಲ್ಲ. ಹಾಗಾಗಿ ನಮ್ಮ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ರವರು ರಾಜಿನಾಮೆ ಕೊಟ್ಟಿರುವವರ ಜೊತೆ ಮಾತಕತೆಯಲ್ಲಿದ್ದಾರೆ ಎಂದು ಧ್ರುವನಾರಾಯಣ್ ಹೇಳಿದ್ರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇನ್ಮುಂದೆ ಲಗೇಜ್ ಸಾಗಿಸುವವರು ಈ ಸುದ್ದಿ ಓದಲೇ ಬೇಕು

ಮಹಾಶಿವರಾತ್ರಿ ದಿನ ಪವರ್ ದೇವರ ಮೊರೆ ಹೋದ ಡಿಕೆ ಶಿವಕುಮಾರ್ ಪತ್ನಿ ಉಷಾ

ಪಕ್ಷದ ವಿಚಾರ ಅಂತಾ ಬಂದ್ರೆ ನಾವೆಲ್ಲರೂ ಒಂದೇ: ಪ್ರಿಯಾಂಕ್ ಖರ್ಗೆ

ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಫೋಟಕ್ಕೆ ಇಬ್ಬರು ಕಾರ್ಮಿಕರು ಸಾವು

ಮಾರ್ಚ್ 9 ರಂದು ಸ್ಪೀಕರ್ ಓಂ ಬಿರ್ಲಾಗೆ ಅಗ್ನಿ‍ಪರೀಕ್ಷೆ: ಅವಿಶ್ವಾಸ ನಿರ್ಣಯದ ಚರ್ಚೆಗೆ ವೇದಿಕೆ ಸಜ್ಜು

ಮುಂದಿನ ಸುದ್ದಿ
Show comments