ಬೈದಾಡಿಕೊಂಡು ಮಾನ ಕಳೆದುಕೊಂಡ ಶಾಸಕ - ಸಂಸದ

Webdunia
ಶನಿವಾರ, 9 ಮೇ 2020 (16:25 IST)
ಏಕವಚನದಲ್ಲಿ ಸಂಸದ ಹಾಗೂ ಶಾಸಕ ಕಿತ್ತಾಡಿಕೊಂಡ ಘಟನೆ ನಡೆದಿದೆ.

ದಾವಣಗೆರೆ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಪರಸ್ಪರ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೋವಿಡ್ -19 ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಏ ಏನೋ ಮಾತಾಡ್ತೀಯಾ ನೀನು ಎಂದ ಸಂಸದ, ಏ ಕೂತುಕೊಳ್ಳೊ ನೀನು, ನಿಂದೇನೋ ಎಂದು ಶಾಸಕ ಮಾಡಾಳು ವಿರುಪಾಕ್ಷಪ್ಪ ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾಡಾಳು ವಿರುಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತಾಡುತ್ತಿರುವ ವೇಳೆ ಸಂಸದ ಜಿ. ಎಂ. ಸಿದ್ದೇಶ್ವರ್ ಆಕ್ಷೇಪಣೆ ಮಾಡುತ್ತಿದ್ದಂತೆ  ಏಕವಚನದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತನಾಡಿದ್ದಾರೆ‌.

ಮಾಡಾಳು ವಿರುಪಾಕ್ಷಪ್ಪ ಮಾತಿಗೆ ಕುರ್ಚಿಯಿಂದ ಎದ್ದು, ಮಾಡಾಳು ಬಳಿ ಬಂದು ಏನೋ ನಿಂದು ಅಂತ ಹೇಳುತ್ತಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿ ಗಲಾಟೆಗೆ ಮುಂದಾಗಿದ್ದಾರೆ. ಈ ವೇಳೆ ಎಸ್ ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ಗಲಾಟೆಗೆ ಬ್ರೇಕ್ ಹಾಕಿದ್ದು, ಸಂಸದ ಹಾಗೂ ಶಾಸಕರ ವರ್ತನೆಯಿಂದ ಮೂಕಪ್ರೇಕ್ಷರಾದ ಸಚಿವದ್ವಯರು ನೋಡುತ್ತ ಕೂತಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಂಜನೇಯಸ್ವಾಮಿಯೇ ಬಂದನೋ... ಹನುಮಂತನ ವಿಗ್ರಹದ ಮುಂದೆ ಕೂತ ಕೋತಿ ಮಾಡಿದ್ದೇನು: ಅಚ್ಚರಿಯ Video

ನಾವು ಒಗ್ಗಟ್ಟಾಗಿ ನಿಂತಿದ್ದೇವೆ, ಮುಂದೆಯೂ ಒಗ್ಗಟ್ಟಾಗಿಯೇ ನಿಲ್ಲುತ್ತೇವೆ

ಜೂನ್ 1 ರಿಂದ ಬೆಂಗಳೂರು- ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ

ಡಿಕೆ ಶಿವಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಪ್ರಕ್ರಿಯೆ ನಡೆದ ಪ್ರತಿಕ್ಷಣದ ವಿವರ, ಸುರ್ಜೇವಾಲ ಮಾತು Video

ಶಾಸಕಾಂಗ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿಯಾದ ಡಿಕೆ ಶಿವಕುಮಾರ್, ಕಾರಣ ಏನ್ ಗೊತ್ತಾ

ಮುಂದಿನ ಸುದ್ದಿ
Show comments