Select Your Language

Notifications

webdunia
webdunia
webdunia
webdunia

ಭೂವಿವಾದದಿಂದಾಗಿ ಯೋಗೀಶ್ ಗೌಡ ಹತ್ಯೆ: ಆರೋಪಿಗಳು ಆರೆಸ್ಟ್

ಯೋಗೀಶ್ ಗೌಡ
ಧಾರವಾಡ , ಶುಕ್ರವಾರ, 17 ಜೂನ್ 2016 (18:21 IST)
ಭೂ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆಯಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಹೇಳಿದ್ದಾರೆ.
 
ಹುಬ್ಭಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಣೆ, ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಯೋಗೀಶ್ ಗೌಡ ಹತ್ಯೆಯಾಗಿದ್ದು ಹತ್ಯೆ ಮಾಡಿದ ಬಸವರಾಜ್ ಮುತ್ತಗಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
 
ನಾಗೇಶ್‌ಗೆ ಸೇರಿದ 40 ಏಕರೆ ಭೂಮಿಯಲ್ಲಿ 9 ಎಕರೆ ಭೂಮಿಯನ್ನು ಯೋಗೀಶ್ ಖರೀದಿಸಿದ್ದನು. ಆದರೆ 15 ಎಕರೆ ಭೂಮಿಯನ್ನು ದೌರ್ಜನ್ಯ ತೋರಿ ಒತ್ತುವರಿ ಮಾಡಿಕೊಂಡಿದ್ದನು. ನಾಗೇಶ್, 25.8 ಎಕರೆ ಎಕರೆ ಭೂಮಿಯನ್ನು ಬಸವರಾಜ್ ಮುತ್ತಗಿಗೆ ಮುಂಗಡ ಪಡೆದುಕೊಂಡು ನೋಟರಿ ಮಾಡಿಕೊಟ್ಟಿದ್ದನು ಒತ್ತುವರಿ ತೆರುವುಗೊಳಿಸುವಂತೆ ಮುತ್ತಗಿ ಯೋಗೀಶ್ ಗೌಡ್‌ನಿಗೆ ಹೇಳಿದ್ದರಿಂದ.ಆಕ್ರೋಶಗೊಂಡ ಯೋಗೀಶ್ ಗೌಡ ಮುತ್ತಗಿಗೆ ಭೂಮಿ ಖರೀದಿಸದಂತೆ ಜೀವ ಬೆದರಿಕೆ ಹಾಕಿದ್ದನು. 
 
ಇದರಿಂದ ಆಕ್ರೋಶಗೊಂಡ ಆರೋಪಿಗಳಾದ ಬಸವರಾಜ್ ಮುತ್ತಗಿ ಮತ್ತು ಆತನ ಸಹಚರರು ಯೋಗೀಶ್‌ಗೌಡನ ಜಿಮ್‌ಗೆ ನುಗ್ಗಿ ಹತ್ಯೆ ಮಾಡಿದ್ದರು.
 
ಆರೋಪಿಗಳಾದ ಬಸವರಾಜ್ ಮುತ್ತಗಿ, ಕೀರ್ತಿಕುಮಾರ್ ಕುರಹಟ್ಟಿ, ವಿನಾಯಕ್ ಕಟಗಿ,  ವಿಕ್ರಂ ಬಳ್ಳಾರಿ, ಸಂದೀಪ್ ಅಲಿಯಾಸ್ ಸ್ಯಾಂಡಿ ಸೌದತ್ತಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿಯನ್ನು ಕಾಶ್ಮೀರವಾಗಲು ಬಿಡುವುದಿಲ್ಲ: ಸಂಗೀತ್ ಸೋಮ್