ತಾನು ಉತ್ತರ ಪ್ರದೇಶವನ್ನು ಕಾಶ್ಮೀರವನ್ನಾಗಿಸಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕ, ಸಂಸದ ಸಂಗೀತ್ ಸೋಮ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ಸೋಮ್, ಉತ್ತರ ಪ್ರದೇಶದ ಜನರ ಹಕ್ಕುಗಳಿಗಾಗಿ ನಾನು ಹೋರಾಡುತ್ತೇನೆ. ಜನರು ಖೈರಾನಾದಿಂದ ವಲಸೆ ಹೋಗುತ್ತಿದ್ದಾರೆ ಎಂದಾದರೆ ಅವರನ್ನು ಹಿಂತಿರುಗಿ ಕರೆ ತರುವ ಕೆಲಸವನ್ನು ಸಹ ಮಾಡುತ್ತೇನೆ ಎಂದಿದ್ದಾರೆ.
2013ರಲ್ಲಿ ನಡೆದ ಮುಜಪ್ಫರ್ ನಗರ ದಂಗೆಯ ಆರೋಪಿಗಳಲ್ಲೊಬ್ಬರಾಗಿರುವ ಸೋಮ್, ಜನರಿಗೆ ಸುರಕ್ಷಿತ ಭಾವವನ್ನು ತುಂಬಲು ಪಶ್ಚಿಮ ಉತ್ತರ ಪ್ರದೇಶಕ್ಕೆ 'ಪೈದಲ್ ನಿರ್ಭಯ ಯಾತ್ರೆ' ನಡೆಸಲು ಯೋಜಿಸಿದ್ದರು. ಆದರೆ ಸರ್ಕಾರ ಅವರಿಗೆ ಅನುಮತಿಯನ್ನು ನೀಡಿಲ್ಲ.
ಸರ್ಕಾರ ನಿರಾಕರಿಸಿದರೂ ತಾನು ಮಿರತ್‌ನಿಂದ ಖೈರಾನಾಗೆ ಒಂದು ವಾರದ ಪಾದಯಾತ್ರೆ ಹೋಗುವ ನಿರ್ಧಾರವನ್ನು ಸಡಲಿಸುವುದಿಲ್ಲ ಎಂದು ಸೋಮ್ ಹೇಳಿದ್ದಾರೆ.