ಅನರ್ಹ ಶಾಸಕರ ಪುರಾಣ ಬಿಚ್ಚಿಡುವೆ ಎಂದ ಕುಮಾರಸ್ವಾಮಿ

Webdunia
ಗುರುವಾರ, 14 ನವೆಂಬರ್ 2019 (20:39 IST)
ಅನರ್ಹ ಶಾಸಕರ ಪುರಾಣವನ್ನು ಉಪ ಚುನಾವಣೆಯಲ್ಲಿ ಬಿಚ್ಚಿಡುವೆ ಅಂತ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದಾರೆ.

ರೈತರ ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರವು ದಾಖಲೆ ಮಾಡಿತ್ತು. ಜನಪರವಾದ ಸರ್ಕಾರವನ್ನು ಬೀಳಿಸಿದ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಪಕ್ಷದ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಅವರ ನೂತನ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.

2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಕೆ.ಆರ್.ಪೇಟೆಗೆ ಇಂಜಿನಿಯರಿಂಗ್ ಕಾಲೇಜು ನೀಡಿ ಕ್ಷೇತ್ರಕ್ಕೆ 500 ಕೋಟಿ ಅನುದಾನವನ್ನು ನೀಡಿದ್ದೆ. 

ಕೆ.ಆರ್.ಪೇಟೆಗೆ ನಾರಾಯಣಗೌಡನನ್ನು ಕೇಳಿಕೊಂಡು ಅನುದಾನ ಬಿಡುಗಡೆ ಮಾಡಬೇಕಾ? ಸರ್ಕಾರದ ದಾಖಲೆಯನ್ನು ಪರಿಶೀಲಿಸಲಿ, ಅವೇ ಉತ್ತರ ನೀಡ್ತಾವೆ, ನಾನು ಮಂಜೂರು ಮಾಡಿಕೊಟ್ಟಿರುವ ಯೋಜನೆಗಳನ್ನು ಯಡಿಯೂರಪ್ಪ ಮಾಡಿಕೊಟ್ಟರು. ಪುಣ್ಯಾತ್ಮ ಯಡಿಯೂರಪ್ಪ ಇಂದ್ರ, ಚಂದ್ರ ಅಂತೆಲ್ಲಾ ಚಮಚಾಗಿರಿ ಮಾಡ್ತಿರೋ ನಾರಾಯಣಗೌಡ ಹೊಗಳ್ತಿದ್ದಾರೆ ಅಂತ ಕಿಚಾಯಿಸಿದ್ರು.

ನನ್ನ ಕುಟುಂಬವನ್ನು ಎದುರಾಕಿಕೊಂಡು ಪಕ್ಷದ ಟಿಕೆಟ್ ನೀಡಿ ತಪ್ಪು ಮಾಡಿದೆ. ಕುಟುಂಬಕ್ಕೆ ನೋವು ನೀಡಿದೆ. ಸುಳ್ಳು ಆರೋಪಗಳಿಗೆ ಉತ್ತರ ನೀಡಬೇಕಾ? ಸದ್ಯದಲ್ಲಿಯೇ ಮತ್ತೆ ಕೆ.ಆರ್.ಪೇಟೆಗೆ ಬರ್ತೀನಿ. ಈತನ ಪುರಾಣವನ್ನು ಬಿಚ್ಚಿಡ್ತೀನಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವೆಂಬರ್‌ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಕ್ಕೆ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಈ ವಿಚಾರ ಯಾವಾ ಇಲಾಖೆಯಲ್ಲಿ ಗೊತ್ತಾದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್

ಬರೋಬ್ಬರಿ ನಾಲ್ಕು ಗಂಟೆ ತೆಂಗಿನ ಮರ ಏರಿ ಕುಳಿತ ವ್ಯಕ್ತಿ, ಕಾರಣ ಕೇಳಿದ್ರೆ ಶಾಕ್‌

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌

ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments