Webdunia - Bharat's app for daily news and videos

Install App

ನಿಖಿಲ್ ಎಲ್ಲಿದ್ದೀಯಪ್ಪಾ… ಅಂದಿದ್ದ ಕುಮಾರಸ್ವಾಮಿಯಿಂದ ಇಂದು ಮತ್ತೊಂದು ಡೈಲಾಗ್

Krishnaveni K
ಗುರುವಾರ, 24 ಅಕ್ಟೋಬರ್ 2024 (15:46 IST)
ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಎಂದರೆ ಜನರಿಗೆ ನೆನಪಾಗೋದು ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಡೈಲಾಗ್. ಅಂದು ನಿಖಿಲ್ ಸಿನಿಮಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಹೇಳಿದ್ದ ಮಾತು ಸಾಕಷ್ಟು ಟ್ರೋಲ್ ಆಗಿತ್ತು.

ಇದೀಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣ ಉಪ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಈ ವೇಳೆ ಮತ್ತೊಮ್ಮೆ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ. ಅವರ ಈ ಭಾವುಕ ಮಾತುಗಳ ಬಗ್ಗೆ ಜನ ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ.

ನಿಖಿಲ್ ಎಲ್ಲಿದ್ದೀಯಾಪ್ಪಾ ಎಂದಿದ್ದ ಕುಮಾರಸ್ವಾಮಿ ಈಗ ತಮ್ಮ ಪುತ್ರನನ್ನು ಚನ್ನಪಟ್ಟಣ ಅಭ್ಯರ್ಥಿ ಎಂದು ಘೋಷಿಸಿ ‘ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ನಿಖಿಲ್ ನಿಮ್ಮ ಮನೆ ಮಗ. ಅವನನ್ನು ಗೆಲ್ಲಿಸುವ ಜವಾಬ್ಧಾರಿ ನಿಮ್ಮದು’ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಪುತ್ರನ ಹೆಸರು ಘೋಷಣೆ ಮಾಡಿದ ಬಳಿಕ ಕುಮಾರಸ್ವಾಮಿ ನೇರವಾಗಿ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ತೆರಳಿದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ, ಸಾ ರಾ ಮಹೇಶ್ ಸೇರಿದಂತೆ ಪ್ರಮುಖ ನಾಯಕರು ಸಾಥ್ ನೀಡಿದ್ದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ತೊರೆದಿದ್ದ ಸಿಪಿ ಯೋಗೇಶ್ವರ್ ಕಣಕ್ಕಿಳಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments