Webdunia - Bharat's app for daily news and videos

Install App

ಕುಮಾರಸ್ವಾಮಿಯನ್ನು ನಿಂದಿಸಿದ ಸಚಿವ ಜಮೀರ್‌ ಅಹ್ಮದ್ ವಿರುದ್ಧ ದೂರು

Sampriya
ಮಂಗಳವಾರ, 12 ನವೆಂಬರ್ 2024 (18:19 IST)
ಬೆಂಗಳೂರು: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಚಿವ ಜಮೀರ್ ಅಹ್ಮದ್ ವಿರುದ್ಧ ದೂರು ನೀಡಲಾಗಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಹಿರಂಗ ಸಭೆಯಲ್ಲಿ ಸಚಿವ ಜಮೀರ್​ ಅಹ್ಮದ್​ ಖಾನ್​ ಅವರು, ಸಿ.ಪಿ ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಶುರು ಮಾಡಿದ್ರು. ಬಳಿಕ ಜೆಡಿಎಸ್‌ಗೆ ಹೋಗಬೇಕು ಎಂದುಕೊಂಡಿದ್ದರು. ಆದರೆ, ಕರಿಯ ಎಚ್‌​.ಡಿ ಕುಮಾರಸ್ವಾಮಿ ಬಿಜೆಪಿಗಿಂತಲೂ ಡೇಂಜರ್​ ಎಂದಿದ್ದರು.

ಏಯ್​​ ಕುಮಾರಸ್ವಾಮಿ ನಿನಗೆ ಮುಸಲ್ಮಾನರ ಮತ ಬೇಕಾ? ಬಿಜೆಪಿಗೆ ಹೋಗಿ ಮುಸಲ್ಮಾನರನ್ನು ಖರೀದಿ ಮಾಡುತ್ತೀಯಾ? ನಿನ್ನ ರೇಟು ಹೇಳು. ಮುಸಲ್ಮಾನರೇ ಒಂದೊಂದು ಪೈಸೆ ಹಾಕಿ ನಿನ್ನಿಡೀ ಕುಟಂಬವನ್ನೇ ಖರೀದಿ ಮಾಡುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

 ಜನಾಂಗೀಯ ನಿಂದನೆ ಮಾಡಿದ ಜಮೀರ್‌ ವಿರುದ್ಧ ಸೂಕ್ತ ಕ್ರಮಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಕುಮಾರಸ್ವಾಮಿ ಅವರನ್ನು ನಿಂದಿಸಿದ್ದ ಜಮೀರ್​​ ವಿರುದ್ಧ ಇಡೀ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಜಮೀರ್​ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಕಾಲಾ ಕುಮಾರಸ್ವಾಮಿ ಡೇಂಜರ್​ ಅನ್ನೋ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಜಮೀರ್​ ವಿರುದ್ಧ ದೂರು ನೀಡಲಾಗಿದೆ. ವಕೀಲ RLN ಮೂರ್ತಿ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದು, ಜಮೀರ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜಾತಿ, ಧರ್ಮಗಳ ಮಧ್ಯೆ ದ್ವೇಷ ಭಾವನೆ ಬಿತ್ತುವ ಪ್ರಯತ್ನ ಜಮೀರ್​ ಅವರದ್ದು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಧರ್ಮಸ್ಥಳ ಬುರುಡೆ ರಹಸ್ಯದ ಮಾಸ್ಕ್‌ಮ್ಯಾನ್‌ ಬಗ್ಗೆ ಮೊದಲ ಪತ್ನಿ ಶಾಕಿಂಗ್ ಹೇಳಿಕೆ

ಧರ್ಮಸ್ಥಳವನ್ನೇ ನಡುಗಿಸಿದ ಯೂಟ್ಯೂಬರ್‌ ಸಮೀರ್‌ಗೆ ಇದೀಗ ಮುಖ ತೋರಿಸದ ಪರಿಸ್ಥಿತಿ

ಕಪಾಳಮೋಕ್ಷದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸಿಎಂ ರೇಖಾ ಗುಪ್ತಾ

ಮುಂದಿನ ಸುದ್ದಿ
Show comments