Publish Date: Thu, 19 Feb 2026 (10:20 IST)
Updated Date: Thu, 19 Feb 2026 (10:23 IST)
ಬೆಂಗಳೂರು: ಇಂದು ಸಂಜೆ ಕೆಎಸ್ಆರ್ ಟಿಸಿ ನೌಕರರು ನಡೆಸಲು ಉದ್ದೇಶಿಸಿರುವ ಬೆಂಗಳೂರು ಚಲೋ ಪ್ರತಿಭಟನೆಯನ್ನು ತಡೆಯಲು ಸರ್ಕಾರ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
ಕೆಎಸ್ಆರ್ ಟಿಸಿ ನೌಕರರು 38 ತಿಂಗಳ ಹಿಂಬಾಕಿಗೆ ಬೇಡಿಕೆಯಿಟ್ಟಿದ್ದರು. ನೌಕರರು ಮುಷ್ಕರಕ್ಕೆ ಕರೆ ನೀಡುತ್ತಿದ್ದಂತೇ ರಾಜ್ಯ ಸರ್ಕಾರ 26 ತಿಂಗಳ ಹಿಂಬಾಕಿ ಪಾವತಿ ಮಾಡಿ ಸದ್ಯಕ್ಕೆ ಉರಿಯುವ ಬೆಂಕಿ ನಂದಿಸುವ ಪ್ರಯತ್ನ ಮಾಡಿದೆ. ಆದರೆ ಸರ್ಕಾರದ ಪ್ರಯತ್ನ ಫಲಕೊಟ್ಟಂತೆ ಕಾಣುತ್ತಿಲ್ಲ.
ಸರ್ಕಾರ ಹಿಂಬಾಕಿ ಪಾವತಿ ಮಾಡಿದರೂ ಕೆಎಸ್ಆರ್ ಟಿಸಿ ನೌಕರರು ಇಂದು ಸಂಜೆ ಬೆಂಗಳೂರು ಚಲೋ ಮುಂದುವರಿಸಲು ತೀರ್ಮಾನಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಇಂದು ಸಂಜೆ ಕೆಎಸ್ಆರ್ ಟಿಸಿ ನೌಕರರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಮುಷ್ಕರದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. 26 ತಿಂಗಳ ಬಾಕಿ ಪಾವತಿ ಮಾಡಿದರೂ 38 ತಿಂಗಳ ಬಾಕಿ ಮತ್ತು ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಇಂದು ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.