Publish Date: Wed, 18 Feb 2026 (10:15 IST)
Updated Date: Wed, 18 Feb 2026 (10:17 IST)
ಬೆಂಗಳೂರು: ನಾಳೆ ಕೆಎಸ್ಆರ್ ಟಿಸಿ ಬಸ್ ಗೆ ಕಾದರೆ ನಿಮಗೆ ತೊಂದರೆ ಗ್ಯಾರಂಟಿ. ಯಾಕೆಂದರೆ ನಾಳೆ ಸಾಕಷ್ಟು ಬಸ್ ರಸ್ತೆಗಿಳಿಯುವುದೇ ಅನುಮಾನ. ಇದಕ್ಕೆ ಇಲ್ಲಿದೆ ಕಾರಣ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ ಟಿಸಿ ನೌಕರರು ನಾಳೆ ಬೆಂಗಳೂರು ಚಲೋ ಧರಣಿ ನಡೆಸಲಿದ್ದಾರೆ. ಈ ಧರಣಿಯಲ್ಲಿ ಸಾಕಷ್ಟು ಕೆಎಸ್ಆರ್ ಟಿಸಿ ನೌಕರರು ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯದ ಬಹುತೇಕ ಕಡೆ ಕೆಎಸ್ಆರ್ ಟಿಸಿ ಬಸ್ ಸಂಚಾರಕ್ಕೆ ಸಮಸ್ಯೆಯಾಗಬಹುದು.
ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಎಚ್ಚರಿಕೆ ನೀಡಿದ್ದಾರೆ. ಕೆಎಸ್ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡರೆ ಇದ್ದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಕೆಎಸ್ಆರ್ ಟಿಸಿ ನೌಕರರ ಮುಷ್ಕರದಿಂದಾಗಿ ನಾಳೆ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವುದು ಖಚಿತವಾಗಿದೆ. ಹೀಗಾಗಿ ನಾಳೆ ಪ್ರಯಾಣ ಮಾಡಲು ಯೋಜನೆ ಹಾಕಿಕೊಂಡಿರುವವರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಜನವರಿ 29 ರಂದೇ ಈ ಮುಷ್ಕರ ನಡೆಯಬೇಕಿತ್ತು. ಆದರೆ ಆಗ ನೌಕರರ ಸಂಘದ ನಾಯಕ ಅನಂತ ಸುಬ್ಬರಾವ್ ನಿಧನ ಹಿನ್ನಲೆಯಲ್ಲಿ ಮುಷ್ಕರ ಮುಂದೂಡಿಕೆಯಾಗಿತ್ತು.