Select Your Language

Notifications

webdunia
webdunia
webdunia
webdunia

ಡಿಸೆಂಬರ್ 31 ಕ್ಕೆ ಬಸ್ ಮುಷ್ಕರ ಇರುತ್ತಾ, ಅನುಮಾನಗಳಿಗೆ ಇಲ್ಲಿದೆ ಉತ್ತರ

KSRTC

Krishnaveni K

ಬೆಂಗಳೂರು , ಸೋಮವಾರ, 23 ಡಿಸೆಂಬರ್ 2024 (11:44 IST)
ಬೆಂಗಳೂರು: ಡಿಸೆಂಬರ್ 31 ಕ್ಕೆ ಬಸ್ ಮುಷ್ಕರಕ್ಕೆ ಕಾರ್ಮಿಕ ಸಂಘಟನೆ ಕರೆ ನೀಡಿತ್ತು. ಇದರ ಆದರೆ ಬಸ್ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ನೌಕರರ ಒಕ್ಕೂಟ ಹೇಳಿದೆ.
 

ಭತ್ಯೆ ಹೆಚ್ಚಳ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮೊದಲು ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಸರ್ಕಾರ ಮಾತುಕತೆಗೆ ಕರೆದಿಲ್ಲ.

ಹೀಗಾಗಿ ಡಿಸೆಂಬರ್ 31 ರಿಂದ ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲಾ ನಿಗಮಗಳ ಬಸ್ ಓಡಾಟವಿರಲ್ಲ ಎಂದು ಕರಪತ್ರವನ್ನೂ ಹಂಚಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಈಗಾಗಲೇ ಕ್ರಿಸ್ ಮಸ್ ಹಬ್ಬದ ನೆಪದಲ್ಲಿ ಊರಿಗೆ ತೆರಳಿರುವವರು ಓಡಾಡುವುದು ಹೇಗೆ ಎಂಬ ಆತಂಕವಾಗಿತ್ತು.

ಆದರೆ ಈಗ ನೌಕರರ ಒಕ್ಕೂಟ ಬಸ್ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ. ಡಿಸೆಂಬರ್ 31 ರಂದು ಎಲ್ಲಾ ಬಸ್ ಗಳೂ ಯಥಾವತ್ತು ಓಡಾಟ ನಡೆಸಲಿದೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಸಾರ್ವಜನಿಕರು ನಿರಾಳವಾಗುವಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಈ ನಿಯಮಗಳನ್ನು ಪಾಲಿಸಬೇಕು