Publish Date: Mon, 04 May 2020 (10:17 IST)
Updated Date: Mon, 04 May 2020 (10:19 IST)
ಬೆಂಗಳೂರು: ನಿನ್ನೆಯಷ್ಟೇ ನಿಧನರಾದ ನಿತ್ಯೋತ್ಸವ ಕವಿ ಪ್ರೊ. ಕೆಎಸ್ ನಿಸಾರ್ ಅಹಮ್ಮದ್ ಅವರ ಅಂತಿಮ ಕ್ರಿಯೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.
ಅವರ ಓರ್ವ ಪುತ್ರಿ ಅಮೆರಿಕಾದಲ್ಲಿ ನೆಲೆಸಿದ್ದು, ಅವರು ಬಂದ ಬಳಿಕವಷ್ಟೇ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ. ಇಂದು ಮಧ‍್ಯಾಹ್ನ 12 ಗಂಟೆ ವೇಳೆಗೆ ಜೆಸಿ ನಗರದಲ್ಲಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ‍್ಯತೆಯಿದೆ. ಅವರ ಪತ್ನಿಯ ಅಂತ್ಯಕ್ರಿಯೆಯನ್ನೂ ಇಲ್ಲಿಯೇ ಮಾಡಲಾಗಿತ್ತು.
ಕಳೆದ ವರ್ಷ ಪತ್ನಿ ವಿಯೋಗ, ಇತ್ತೀಚೆಗಷ್ಟೇ ಅಮೆರಿಕಾದಲ್ಲಿ ಪುತ್ರನ ನಿಧನ ನಿಸಾರ್ ಅಹಮ್ಮದ್ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಇದೇ ಬೇಸರದಲ್ಲೇ ಖ್ಯಾತ ಕವಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ.