Select Your Language

Notifications

webdunia
webdunia
webdunia
webdunia

ನಮ್ಮ ಮನೆ ಪಕ್ಕದಲ್ಲೇ ಇದ್ದರೂ ಸಿದ್ದರಾಮಯ್ಯನವರ ಪತ್ನಿಯನ್ನು ನೋಡಿಲ್ಲ: ಕೆಎಸ್ ಈಶ್ವರಪ್ಪ

KS Eshwarappa

Krishnaveni K

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (13:52 IST)
ಬೆಂಗಳೂರು: ನಮ್ಮ ಮನೆ ಪಕ್ಕದಲ್ಲೇ ಇದ್ದರೂ ಸಿದ್ದರಾಮಯ್ಯನವರ ಪತ್ನಿಯನ್ನು ನಾನು ನೋಡಿರಲಿಲ್ಲ. ಇದೀಗ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರಿಗೆ ಅನ್ಯಾಯವಾಗಿ ತೊಂದರೆಯಾಗ್ತಿದೆಯಲ್ಲ ಎಂದು ನನಗೆ ಬೇಸರ ಎಂದು ಬಿಜೆಪಿ ಬಂಡಾಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರನ್ನು ಎಳೆದು ತಂದಿರುವುದಕ್ಕೆ ಕೆಎಸ್ ಈಶ್ವರಪ್ಪ ಅನುಕಂಪ ವ್ಯಕ್ತಪಡಿಸಿದ್ದಾರೆ. ‘ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಸಿದ್ದರಾಮಯ್ಯನವರ ಮನೆ ನಮ್ಮ ಮನೆ ಪಕ್ಕದಲ್ಲೇ ಇದ್ದರು. ನಾನು ಸಿದ್ದರಾಮಯ್ಯನವರಿಗೆ ಒಮ್ಮೆ ನಮ್ಮ ಮನೆಯವರು ಅರಶಿನ ಕುಂಕುಮಕ್ಕೆ ಕರೆಯುತ್ತಿದ್ದಾರೆ, ಬರಲಿ ಎಂದಿದ್ದೆ. ಆದರೆ ಅದಕ್ಕೂ ಬಂದಿಲ್ಲ.  ಪಕ್ಕದ ಮನೆಯವರಾಗಿದ್ದರೂ ಒಮ್ಮೆಯೂ ನಾನು ಅವರ ಮುಖವನ್ನೂ ನೋಡಲಿಲ್ಲ’ ಎಂದು ಈಶ್ವರಪ್ಪ ಹೇಳಿದ್ದಾರೆ.

ನಾವು ಏನೋ ವ್ಯವಹಾರಗಳಿಗೆ ಇನ್ ಟ್ಯಾಕ್ಸ್ ವಿಚಾರಕ್ಕೆ ನಮ್ಮ ಮನೆಯವರ ಸಹಿ ಪಡೆಯುತ್ತೇವೆ. ಅದೇ ರೀತಿ ಪಾರ್ವತಮ್ಮನವರ ಸಹಿಯನ್ನೂ ಮುಡಾ ಸೈಟಿಗೆ ಪಡೆದಿರಬಹುದು. ಬಹುಶಃ ಅವರಿಗೆ ಅದು ಏನಕ್ಕೆ ಸಹಿ ತೆಗೆದುಕೊಂಡಿದ್ದಾರೆ ಎಂಬುದೂ ಗೊತ್ತಿರಲಿಲ್ಲ. ಹೀಗಾಗಿ ಅನ್ಯಾಯವಾಗಿ ಪಾರ್ವತಮ್ಮನವರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಈಶ್ವರಪ್ಪ ಹೇಳಿದ್ದಾರೆ.

ಇನ್ನು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಎಸ್ ಈಶ್ವರಪ್ಪ, ನಾನು ಈ ಸರ್ಕಾರಕ್ಕೆ ಕೇವಲ ಹಿಂದೂಗಳ ಪರವಾಗಿ ಇರಿ ಎಂದು ಹೇಳುತ್ತಿಲ್ಲ. ಬದಲಾಗಿ ಎಲ್ಲರನ್ನೂ ಸಮಾನವಾಗಿ ನೋಡಲಿ ಎಂದಷ್ಟೇ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರಿಗೆ ದೂರದೃಷ್ಟಿಯಿದೆ: ಸ್ಯಾಮ್ ಪಿತ್ರೋಡಾ