ಕ್ರಿಶ್ಚಿಯನ್ ಪಾದ್ರಿಗಳ ಕೈವಾಡದಿಂದ ತಿರುಪತಿ ಲಡ್ಡಿನಲ್ಲಿ ಕಲಬೆರಕೆ: ಈಶ್ವರಪ್ಪ ಆರೋಪ

Krishnaveni K
ಶನಿವಾರ, 21 ಸೆಪ್ಟಂಬರ್ 2024 (14:08 IST)
ಹೈದರಾಬಾದ್: ವಿದೇಶೀ ಕ್ರಿಶ್ಚಿಯನ್ನರ ಕೈವಾಡದಿಂದ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿ ಕಲಬೆರಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ತಿರುಪತಿ ತಿಮ್ಮಪ್ಪ ಬರೀ ನಮ್ಮ ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮನ್ನಣೆ ಪಡೆದ ದೇವರು. ದೇವರ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು, ಲಡ್ಡು ಪ್ರಸಾದ ತಂದರೆ ನನ್ನ ಜನ್ಮ ಪಾವನಾಯಿತು ಎಂಬ ಭಾವನೆಯಿದೆ.

ಆದರೆ ಈಗ ನಿನ್ನೆ ಈ ಘಟನೆಯಾಗಿಲ್ಲ. ಜಗಮೋಹನ್ ರೆಡ್ಡಿ ಆಡಳಿತದಲ್ಲೇ ಕಲಬೆರಕೆ ಯಾಕೆ ಆಯಿತು ಅಂತ ನೀವು ಕೇಳಿದ್ರಲ್ಲಾ? ಇದಕ್ಕೆ ಕಾರಣ ವಿದೇಶೀ ಕ್ರಿಶ್ಚಿಯನ್ ಪಾದ್ರಿಗಳ ಷಡ್ಯಂತ್ರ. ಜಗಮೋಹನ್ ರೆಡ್ಡಿ ಅವರು ಕನ್ವರ್ಟೆಡ್ ಕ್ರಿಶ್ಚಿಯನ್. ಅವರು ಗೊತ್ತಿಲ್ಲದೇ ಮಾಡಿದ್ದಾರಾ? ಅಲ್ಲಿನ ಅಧಿಕಾರಿಗಳೇ ಕಲಬೆರಕೆಯಾಗಿದೆ ಎಂದು ಹೇಳುತ್ತಲೇ ಇದ್ದಾರೆ. ಗೊತ್ತಿದ್ದೂ  ಮಾಡಿದ್ಯಾಕೆ?

ಹಿಂದೂ ಸಮುದಾಯದ ಮೇಲೆ ಆಗುತ್ತಿರುವ ಷಡ್ಯಂತ್ರ, ಗಣೇಶ ದೇವರ ಮೇಲಾಗುತ್ತಿರುವ ಅನ್ಯಾಯ, ತಿರುಪತಿ ತಿಮ್ಮಪ್ಪನ ಲಡ್ಡಿನಲ್ಲಿ ಆಗಿರುವ ಕಲಬೆರಕೆ ಅಥವಾ ರಾಷ್ಟ್ರಭಕ್ತದ ಧ್ವಜದ ಬಗ್ಗೆಯಿರಬಹುದು ಎಲ್ಲವೂ ಷಡ್ಯಂತ್ರ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜೀನ್ಸ್ ಪಾರ್ಕ್ ಎಲ್ಲಪ್ಪ: ರಾಹುಲ್ ಗಾಂಧಿಗೆ ಪ್ರಶ್ನಿಸಿದ ಆರ್ ಅಶೋಕ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನಿತೀಶ್ ಕುಮಾರ್ ಇಂದು 10 ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ: ಯಾರೆಲ್ಲಾ ಭಾಗಿಯಾಗಲಿದ್ದಾರೆ

ಮುಂದಿನ ಸುದ್ದಿ
Show comments