ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮೂಡುವಂತಾಗಿದ್ದು, ನಾಲ್ಕು ವರ್ಷಗಳ ಬಳಿಕ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ.
ಮಂಡ್ಯದ ಅನ್ನದಾತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿದಿದ್ರು. ಆದ್ರೆ ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬಂದಿದ್ದರಿಂದ ಮಂಡ್ಯಜಿಲ್ಲೆಯ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದ್ದು, ಇಂದು ಬೆಳಿಗ್ಗೆ 122.70 ಅಡಿಇದ್ದ ಅಣೆಕಟ್ಟೆ ಮಧ್ಯಾಹ್ನದ ವೇಳೆಗೆ 123.20 ಅಡಿ ನೀರು ತುಂಬಿದ್ದು, ಸಂಪೂರ್ಣ ಭರ್ತಿಗೆ ಇನ್ನು ಕೇವಲ ಒಂದು ಅಡಿ ಮಾತ್ರ ಇತ್ತು. ಈ ನಿಟ್ಟಿನಲ್ಲಿ ಇಂದು ಅಣೆಕಟ್ಟೆ ಮುಂಭಾಗಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಣೆಕಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಿದ್ರು.
ವಾಡಿಕೆಯಂತೆ ಅಣೆಕಟ್ಟೆ ತುಂಬೋದು ಆಗಸ್ಟ್ ನಲ್ಲಿ. ಆದ್ರೆ ಈ ಬಾರಿ ಜುಲೈ ತಿಂಗಳಲ್ಲಿಯೇ ಅಣೆಕಟ್ಟೆ ಸಂಪೂರ್ಣ ತುಂಬಿದೆ. ನಾಲ್ಕು ವರ್ಷಗಳ ಹಿಂದೆ ಅಣೆಕಟ್ಟೆ ಸಂಪೂರ್ಣಭರ್ತಿಯಾಗಿದ್ದು, 2014ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದು ಬಿಟ್ರೆ ಇದುವರೆಗೂ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿರಲಿಲ್ಲ. ಇದೀಗ ಅಣೆಕಟ್ಟೆ ಭರ್ತಿಯಾಗಿರೋದುರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.