Publish Date: Sat, 27 Jul 2024 (11:41 IST)
Updated Date: Sat, 27 Jul 2024 (11:44 IST)
ಬೆಂಗಳೂರು: ಬಿಹಾರ ಮೂಲದ ಯುವತಿ ಕೃತಿ ಕುಮಾರಿಯನ್ನು ಬೆಂಗಳೂರಿನ ಪಿಜಿಯಲ್ಲಿ ಹತ್ಯೆ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತಿ ಕುಮಾರಿ ಗೆಳತಿಯ ಪ್ರೇಯಸಿ ಅಭಿಷೇಕ್ ಆರೋಪಿ. ತನ್ನ ಪ್ರೇಯಸಿಯನ್ನು ಬಲವಂತವಾಗಿ ಬಾಡಿಗೆ ಮನೆಯೊಂದರಲ್ಲಿ ಇರಿಸಿಕೊಂಡಿದ್ದ. ಆದರೆ ಅಲ್ಲಿಂದ ಆಕೆಯನ್ನು ರಕ್ಷಿಸಲು ಕೃತಿ ಕುಮಾರಿ ಸಹಾಯ ಮಾಡಿದ್ದಳು. ಇದೇ ಕಾರಣಕ್ಕೆ ರಾತ್ರಿ 11.30 ರ ವೇಳೆಗೆ ಕೋರಮಂಗಲದ ಪಿಜಿಗೆ ನುಗ್ಗಿದ ಆರೋಪಿ ಅಭಿಷೇಕ್ ಎಲ್ಲರೂ ನೋಡುತ್ತಿರುವಂತೆಯೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದ.
ಈತನ ಕೃತ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಘಟನೆ ವೇಳೆ ಕೃತಿ ಸಹಾಯಕ್ಕಾಗಿ ಪಿಜಿಯಲ್ಲಿದ್ದ ಯುವತಿಯರನ್ನು ಕರೆದಿದ್ದಳು. ಆದರೆ ಅವರು ಅಸಹಾಯಕರಾಗಿ ನಿಂತು ನೋಡುತ್ತಿದ್ದರೇ ವಿನಹ ಸಹಾಯಕ್ಕೆ ಧಾವಿಸಲಿಲ್ಲ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದು ಅಭಿಷೇಕ್ ತಲೆಮರೆಸಿಕೊಂಡಿದ್ದ. ಆತ ಪರ ರಾಜ್ಯಕ್ಕೆ ಓಡಿ ಹೋಗಿರಬಹುದು ಎಂದು ಶಂಕಿಸಲಾಗಿತ್ತು.
ಇದೀಗ ಪೊಲೀಸರು ಅತನನ್ನು ಮಧ್ಯಪ್ರದೇಶದಲ್ಲಿ ಬಂಧನ ಮಾಡಿದ್ದಾರೆ. ಕೃತ್ಯ ನಡೆದ ದಿನದಿಂದಲೂ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಕೊನೆಗೂ ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.