ಬೆಂಗಳೂರು: ಇಲ್ಲಿನ ಜಿಕೆವಿಕೆ ಆವರಣದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳೆ ಹಮ್ಮಿಕೊಳ್ಳಲಾಗಿದೆ. ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಕೃಷಿ ಮೇಳ ನಡೆಯಲಿದೆ.
ನಾಳೆ ಅಂದರೆ ನವಂಬರ್ 17 ರಿಂದ 20 ರವರೆಗೆ ಕೃಷಿ ಮೇಳ ನಡೆಯಲಿದೆ. ಬರಗಾಲದಲ್ಲಿ ರೈತರು ಬೆಳೆಯಬಹುದಾದ ವಿಶೇಷ ಬೆಳೆಗಳ ಬಗ್ಗೆ ಈ ಬಾರಿ ಕೃಷಿ ಮೇಳದಲ್ಲಿ ವಿಶೇಷ ಮಾಹಿತಿ ಸಿಗಲಿದೆ. 10ಕ್ಕೂ ಹೆಚ್ಚು ಜಿಲ್ಲೆಗಳ ಕೃಷಿ ಸಾಧಕರಿಗೆ ಪ್ರಶಸ್ತಿ, ಸನ್ಮಾನ ಕಾರ್ಯಕ್ರಮವಿರಲಿದೆ.
ಜೊತೆಗೆ ಕೃಷಿ, ಕೃಷಿ ಉತ್ಪನ್ನಗಳು, ಪರಿಕರಗಳ ಮಾರಾಟ ಮಳಿಗೆಗಳು ಇರಲಿವೆ. ಲಕ್ಷಾಂತರ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.