Select Your Language

Notifications

webdunia
webdunia
webdunia
webdunia

ಕೋವಿಡ್- 19 : ಮತ್ತೆ ಇಬ್ಬರಿಗೆ ಬಿಡುಗಡೆ ಭಾಗ್ಯ

ಕೋವಿಡ್- 19 :  ಮತ್ತೆ ಇಬ್ಬರಿಗೆ ಬಿಡುಗಡೆ ಭಾಗ್ಯ
ಬೆಳಗಾವಿ , ಮಂಗಳವಾರ, 21 ಏಪ್ರಿಲ್ 2020 (17:12 IST)
ಕೋವಿಡ್ -19 ವೈರಸ್ ನಿಂದ ಬಳಲಿದವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಕೋವಿಡ್-19 ಸೋಂಕು ತಗುಲಿದ್ದ ಇಬ್ಬರು ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ  ತಿಳಿಸಿದ್ದಾರೆ.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ 20 ವರ್ಷದ ಯುವಕ ಹಾಗೂ ರಾಯಬಾಗ ತಾಲ್ಲೂಕು ಕುಡಚಿಯ 40 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಈ ಇಬ್ಬರೂ ಏಪ್ರಿಲ್ 1 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಈ ಪೈಕಿ ಬೆಳಗುಂದಿ ಗ್ರಾಮದವರಾದ ಓರ್ವನನ್ನು  ಈಗಾಗಲೇ ಸರ್ಕಾರದ ಮಾರ್ಗಸೂಚಿಯ ಅನುಸಾರ  ಏ‌ಪ್ರಿಲ್ 18 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.  ಇಲ್ಲಿಯವರೆಗೆ ಒಟ್ಟಾರೆ ಮೂರು ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ಕೋಮು ಸೌಹಾರ್ದತೆ ಕೆಡಿಸಿದ್ರೆ ಹುಷಾರ್ ಎಂದ ಎಸ್ ಪಿ