Publish Date: Thu, 19 Sep 2019 (18:54 IST)
Updated Date: Thu, 19 Sep 2019 (18:55 IST)
ರಾಜ್ಯದಲ್ಲಿ ಶೀಘ್ರವಾಗಿ ಚುನಾವಣೆ ನಡೆಯಲಿದೆ ಅಂತ ಕೋಡಿ ಹಳ್ಳಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಚುನಾವಣೆ ಪೂರ್ವದಲ್ಲಿಯೇ 18 ತಿಂಗಳು ನಂತರ ಮತ ಭಿಕ್ಷೆ ಎಂಬುದಾಗಿ ಹೇಳಿಕೆ ನೀಡಲಾಗಿತ್ತು. ಈಗಾಗಲೇ 15 ತಿಂಗಳು ಮುಗಿದಿವೆ. ಮೂರ್ನಾಲ್ಕು ತಿಂಗಳಲ್ಲಿ ಕಾದು ನೋಡಿ ರಾಜಕೀಯ ಅಚ್ಚರಿ ಅಂದಿದ್ದಾರೆ.
ದೇವರು, ಧರ್ಮದ ಬಗ್ಗೆ ಭವಿಷ್ಯ ಹೇಳಬಹುದು ಆದರೆ ಅನರ್ಹ ಶಾಸಕರ ಬಗ್ಗೆ ಹೇಳೋದೇನಿದೆ? ಎಂದಿರೋ
ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಪಾಕಿಸ್ತಾನದೊಂದಿಗೆ ಯುದ್ಧದ ಸನ್ನಿವೇಶ ಮುಂದುವರಿಯಲಿದೆ ಅಂತ ಭವಿಷ್ಯ ನುಡಿದ್ರು.