Publish Date: Sat, 10 Apr 2021 (12:04 IST)
Updated Date: Sat, 10 Apr 2021 (12:06 IST)
ಬೆಳಗಾವಿ : ಸಾರಿಗೆ ನೌಕರರ ಜೊತೆ ಸಭೆ ಕರೆದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸಾರಿಗೆ ನೌಕರರು ಈಗಾಗಲೇ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜನರು ಬಸ್ ಗಳಿಲ್ಲದೆ ಪರದಾಡುವಂತಾಗಿತ್ತು.
ಆದರೆ ಇಂದು ಕೋಡಿ ಹಳ್ಳಿ ಚಂದ್ರಶೇಖರ್ ಅವರು ಬೆಳಗಾವಿಯ ಹೋಟೆಲ್ ವೊಂದರಲ್ಲಿ ರೈತ ಮುಖಂಡರು ಮತ್ತು ಸಾರಿಗೆ ನೌಕರರ ಜತೆ ಸಭೆ ಕರೆದಿದ್ದರು. ಹೀಗಾಗಿ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ಸಭೆ ನಡೆಯುತ್ತಿದ್ದಾಗ ಹೋಟೆಲ್ ಗೆ ಬಂದ ಪೊಲೀಸರು ಕೋಡಿಹಳ್ಳಿ. ವಶಕ್ಕೆ ಪಡೆದಿದ್ದಾರೆ.