Select Your Language

Notifications

webdunia
webdunia
webdunia
webdunia

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Kodi seer

Krishnaveni K

ಬೆಂಗಳೂರು , ಶನಿವಾರ, 24 ಮೇ 2025 (12:27 IST)
ಬೆಂಗಳೂರು: ಈಗಾಗಲೇ ಭಾರತಕ್ಕೀ ಕಾಲಿಟ್ಟಿರುವ ಕೊವಿಡ್ ಮಹಾಮಾರಿ ಮತ್ತೆ ಕಂಟಕವಾಗುತ್ತಾ? ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ ಏನು ಹೇಳುತ್ತದೆ? ಇಲ್ಲಿದೆ ನೋಡಿ ವಿವರ.

ಮಾಧ್ಯಮಗಳಿಗೆ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯ ವಾಣಿ ನುಡಿದಿದ್ದಾರೆ. ವಾಯು ರೂಪದಲ್ಲಿ ಅಪಾಯಕಾರಿ ರೋಗ ಬರುತ್ತದೆ. ಇದು ಮುಂದಿನ 5 ವರ್ಷ ಇರಲಿದೆ. ಇದು ಲೋಕಕ್ಕೇ ಗಂಡಾಂತರವಿರಲಿದೆ. ವಾಯು ಮೂಲಕ ಹರಡುತ್ತದೆ, ಉಸಿರಾಟದ ಸಮಸ್ಯೆಯಾಗುತ್ತದೆ. ಈಗಾಗಲೇ ಈ ರೋಗ ಬಂದಿದೆ. ಶಿರ ತನಕ ಬಂದು ಮನುಷ್ಯನಿಗೆ ಸಾವು ಬರುವ ಅಪಾಯವಿದೆ.

ಈ ಬಾರಿ ಹಿಮಾಲಯದಿಂದ ಅಪಾಯವಿದೆ. ಇದು ದೆಹಲಿವರೆಗೆ ವ್ಯಾಪಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗುತ್ತವೆ. ಜಲ ಕಂಟಕ, ವಾಯು ಕಂಟಕ, ಭೂಕಂಪವಾಗುವ ಸಾಧ್ಯತೆಯಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ ಆಗಿದೆ. ಯಾವುದನ್ನೂ ನಾವು ಉಳಿಸಿಲ್ಲ. ಈ ಸಾರಿ ಬರುವ ಖಾಯಿಲೆ ಬಗ್ಗೆ ಎಚ್ಚರಿಕೆ ಅಗತ್ಯ ಎಂದಿದ್ದಾರೆ.

ಇನ್ನು, ರಾಜ್ಯ ಸರ್ಕಾರದ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿವರೆಗೂ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿ ಬಳಿಕ ಆಮೇಲೆ ಹೇಳಬಹುದು. ಆ ನಂತರ ಅತಂತ್ರವಾದರೂ ಆಗಬಹುದು. ರಾಜಕೀಯವಾಗಿ ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು. ಹೊಸ ದೇಶಗಳು ಉತ್ಪತ್ತಿಯಾಗುತ್ತದೆ, ಹಲವು ದೇಶಗಳು ಅಳಿಸಿಹೋಗುತ್ತದೆ. ಕೆಲವು ರಾಜಕೀಯ ನಾಯಕರ ಸಾವಾಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ