ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬರುತ್ತಾ: ಕೋಡಿ ಶ್ರೀ ಹೇಳಿದ ಭವಿಷ್ಯವೇನು

Krishnaveni K
ಸೋಮವಾರ, 9 ಸೆಪ್ಟಂಬರ್ 2024 (14:03 IST)
ಬೆಂಗಳೂರು: ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಬರಬಹುದು ಎಂಬ ಆತಂಕದ ನಡುವೆಯೇ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ವಿದ್ಯಮಾನಗಳ ಬಗ್ಗೆ ಕರಾರುವಾಕ್ ಆಗಿ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಇದೀಗ ಸಿದ್ದರಾಮಯ್ಯ ಭವಿಷ್ಯದ ಬಗ್ಗೆ ಮತ್ತು ದೇಶದಲ್ಲಿ ಆಗಬಹುದಾದ ಪ್ರಕೃತಿ ವಿನಾಶಗಳ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ನಾನು ಈಗಾಗಲೇ ಹೇಳಿದಂತೆ

ಮಳೆಯಿಂದ ಇನ್ನಷ್ಟು ದೋಷವಾಗಲಿದೆ. ಭೂಮಿ, ಅಗ್ನಿ, ವಾಯು, ಆಕಾಶದಿಂದ ತೊಂದರೆಯಾಗಲಿದೆ. ಇನ್ನೊಂದು ಆಕಾಶದಿಂದ ದೊಡ್ಡ ತೊಂದರೆಯಾಗಲಿದೆ. ಯುದ್ಧದಿಂದ ತೊಂದರೆಯಾಗಬಹುದು. ಮಳೆಯಿಂದಾಗಿ ಇನ್ನೂ ಅನಾಹುತವಾಗಬಹುದು. ಒಂದು ಆಘಾತಕಾರಿ ತೊಂದರೆಯಾಗಬಹುದು. ಅದು ರಾಜನ ಮೇಲೆ ಪರಿಣಾಮ ಬೀರುತ್ತದೆ.

ಕೋರ್ಟ್ ನಲ್ಲಿದೆ. ಈಗ ಇದರ ಬಗ್ಗೆ ಹೇಳುವುದು ಬೇಡ. ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಅಭಿಮನ್ಯುವಿನ ಬಿಲ್ಲನ್ನು ಕರ್ಣನ ಕೈಯಲ್ಲಿ ಮೋಸದಿಂದ ದಾರ ಕಟ್ ಮಾಡಿಸ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲ ದುರ್ಯೋಧನ ಗೆಲ್ತಾನೆ ಎಂದು ಹೇಳಬಲ್ಲೆ. ರಾಜ್ಯ ಮತ್ತು ಕೇಂದ್ರದಲ್ಲಿ ಇದೇ ಆಗುವುದು ಎಂದಿದ್ದಾರೆ.

ಕೋಡಿ ಶ್ರೀಗಳು ಹೇಳಿದ ಭವಿಷ್ಯ ಅನೇಕ ಬಾರಿ ನಿಜವಾಗಿದ್ದು ಇದೆ. ಹೀಗಾಗಿ ಅವರು ಈಗ ಅಧಿಕಾರ ಬದಲಾವಣೆ ಹೇಳಿರುವ ಮಾತುಗಳು ನಿಜವಾಗುತ್ತದೆಯೇ ಎಂದು ನೋಡಬೇಕಿದೆ. ಇನ್ನು, ಯಾವುದೋ ಒಂದು ಅನಾಹುತದಿಂದಾಗಿ ಸ್ಥಾನ ಪಲ್ಲಟವಾಗಬಹುದು ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಲಾರಿಯಡಿ ಸಿಲುಕಿ ಸ್ಥಳದಲ್ಲೇ ನರಳಾಡಿ ಪ್ರಾಣ ಬಿಟ್ಟ ದ್ವಿಚಕ್ರ ವಾಹನ ಸವಾರನನ್ನು ಕೇಳೋರೇ ಇಲ್ಲ

ಕಾರ್ಕಳ: ಮುಖ್ಯ ಶಿಕ್ಷಕರು ಹೇಳಿದ್ರೂ ಕೇಳದೇ ಜನಿವಾರ, ದಾರ ತೆಗೆಸುತ್ತಿದ್ದ ಶಿಕ್ಷಕ ಅಮಾನತು

ಖರ್ಗೆ ಭೇಟಿ ಫೋಟೋ ಹಾಕಿದ್ರಿ, ಮೋದಿ ಜೊತೆಗಿರುವ ಫೋಟೋ ಯಾಕಿಲ್ಲ: ಸಿದ್ದರಾಮಯ್ಯಗೆ ಪ್ರಶ್ನೆ

ಪತ್ನಿಗೆ ಅನಾರೋಗ್ಯ, ಕೆಲಸ ಕಾರ್ಯ ಬಿಟ್ಟು ಓಡಿ ಬಂದ ಸಿಎಂ ಸಿದ್ದರಾಮಯ್ಯ

Karnataka Weather: ಮುಗಿದಿಲ್ಲ ಮಳೆಗಾಲ, ಇಂದು ಈ ಜಿಲ್ಲೆಗಳಿಗೆ ಮಳೆ ಸಾಧ್ಯತೆ

ಮುಂದಿನ ಸುದ್ದಿ
Show comments