Publish Date: Wed, 05 Dec 2018 (20:51 IST)
Updated Date: Wed, 05 Dec 2018 (20:54 IST)
ಯಡಿಯೂರಪ್ಪ ನವರ ಶಕ್ತಿ ನನಗೆ ಗೊತ್ತಿದೆ. ಅವರ ಜೊತೆ ಎರಡು ವರ್ಷ ನಾನು ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಕ್ಷವನ್ನ ನಾಯಿ ಸಹ ಮೂಸುವುದಿಲ್ಲ ಅಂತ ಕೆಜೆಪಿ ಪಕ್ಷ ಸಂಸ್ಥಾಪಕ ವಿವಾದಿತ ಹೇಳಿಕೆ ನೀಡಿದ್ದಾರೆ.
ತುಮಕೂರಿನ ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಸಂಸ್ಥಾಪಕ ಪಧ್ಮನಾಭ ಪ್ರಸನ್ನ ಹೇಳಿಕೆ ನೀಡಿದ್ದು, ಯಡಿಯೂರಪ್ಪ ನವರು ಹಾಕಿಕೊಟ್ಟ ದಾರಿಯಲ್ಲಿ ಸಂಘಟನೆ ಮಾಡಿದ್ದೀವಿ. ಕೆಜೆಪಿ ಪಕ್ಷ ಚೆನ್ನಾಗಿ ಪಿಕಪ್ ಆಗಿದೆ. ಯಡಿಯೂರಪ್ಪನವರ ವರ್ಚಸ್ಸಿನಿಂದಲೇ ಬಿಜೆಪಿ 104 ಸೀಟ್ ಪಡೆದುಕೊಂಡಿದೆ. ಉ- ಕ ಭಾಗ, ಹೈ -ಕ ಭಾಗ, ತುಮಕೂರು ಭಾಗದಲ್ಲಿ ಯಡಿಯೂರಪ್ಪನವರ ಹೆಸರಿನಿಂದಲೇ ಓಟ್ ಬೀಳ್ತಿರೋದು. ಯಡಿಯೂರಪ್ಪನವರು ಗೆದ್ದು ಸರ್ಕಾರ ರಚನೆ ಮಾಡಲಿಕ್ಕೆ ಬಂದರು. ಒಳಗೊಳಗೆ ಗುಂಪುಗಾರಿಕೆ ಆಗಿ ಸಿಎಂ ಆಗ್ತಾರೆ ಅಂತಾ ಪ್ರಯತ್ನ ಪಟ್ಟು ಅವರನ್ನ ತುಳಿದು ಮಟಾಶ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ದೂರಿದರು.
ಹೀಗೆ ಮುಂದುವರಿದ್ರೆ ಬಿಜೆಪಿ ಮುಂದೆ ಎಂಪಿ ಎಲೆಕ್ಷನ್ ನಲ್ಲಿ 10 ಸೀಟು ಕೂಡ ಗೆಲ್ಲಲಿಕ್ಕೆ ಆಗೋದಿಲ್ಲ. ಈಗಾಗಲೇ ಯಡಿಯೂರಪ್ಪ ಅಮಿತ್ ಷಾ ಗೆ ಲೆಟರ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹತ್ತು ಕಡೆ ಸೋಲುತ್ತೆ ಇದನ್ನ ಸರಿಪಡಿಸಿ ಅಂತಾ. ಇಲ್ಲಿ ಗುಂಪುಗಾರಿಕೆ ಇದೆ ಅಂಥಾ ಲೆಟರ್ ಬರೆದಿದ್ದಾರೆ ಎಂದು ಯಡಿಯೂರಪ್ಪನ ಗುಣಗಾನ ಮಾಡಿದ ಕೆಜೆಪಿ ಪಧ್ಮನಾಭ ಪ್ರಸನ್ನ ಗಮನ ಸೆಳೆದರು.