Webdunia - Bharat's app for daily news and videos

Install App

ಕ್ರಿಕೆಟ್ ವಿಚಾರಕ್ಕೆ ಶುರುವಾಗಿತ್ತು ಕಿರಿಕ್

Webdunia
ಭಾನುವಾರ, 13 ಆಗಸ್ಟ್ 2023 (18:21 IST)
ಕ್ರಿಕೆಟ್ ನಲ್ಲಿ ಸೋಲು-ಗೆಲುವಿನ ವಿಚಾರವಾಗಿ ಶುರುವಾದ ಕಿರಿಕ್ ನಡು ರಸ್ತೆಯಲ್ಲಿ ಬಡಿದಾಡೊವರೆಗು ಬಂದು ಬಿಟ್ಟಿದೆ.ಕಿಡಿಗೇಡಿಗಳು ಟೆನಿಸ್ ಕೋಚ್ ಮೇಲೆ ರಾಕ್ಷಸರಂತೆ ಮುಗಿಬಿದ್ದಿದ್ದಾರೆ.ಕಿಚನ್ ಐಟಂ ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.ಘಟನೆಯ ದೃಶ್ಯ ನಿಜಕ್ಕೂ ಬೆಚ್ಚಿ ಬೀಳುವಂತಿದೆ.ನೀರಿನ್ ಕ್ಯಾನ್ ಎತ್ತಾಹಿ ಹಲ್ಲೆ..ಸೌಟ್ ನಿಂದ ಹೊಡೆದು ಅಟ್ಟಹಾಸ..ಬಾಂಡಲಿಯಿಂದ ಬಡಿದು ಕ್ರೌರ್ಯ..ಹೀಗೆ ಯುವಕರ ಗುಂಪಿನ ದಾಳಿಗೆ ಆವತ್ತು ಸಹೋದರರು ನಡುಗಿ ಹೋಗಿದ್ರು..ನಡು ರಸ್ತೆಯಲ್ಲೇ ಪ್ರಜ್ಙೆ ತಪ್ಪಿ ಬಿದ್ದಿದ್ರು...ಆದ್ರೆ ಅಂದು ದಾದಾಗಳಂತೆ ದಾಂಗುಡಿ ಇಟ್ಟು ಹಲ್ಲೆ ಮಡಿದ್ದ ಕ್ರಿಮಿಗಳು ಇವತ್ತು ಬಾಲ‌ ಸುಟ್ಟ ಬೆಕ್ಕಿನಂತಾಗಿದ್ದಾರೆ.

ಬೆಂಗಳೂರಿನ ಕೂಡ್ಲು ನಿವಾಸಿಗಳು.ಏರಿಯಾ ಬಿಟ್ಟು ಹರಳೂರು ರಸ್ತೆಗೆ ಬಂದಿದ್ದ ಕ್ರಿಮಿಗಳು ಸುನೀಲ್ ಜೋಯೆಲ್ ಮತ್ತು ಜೋಸೆಫ್ ಸಹೋದರರ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.ಆಗಿದ್ದೇನಂದ್ರೆ ರಮೇಶ್ ಮತ್ತು ಜೀವನ್ ನಡುವೆ ಕ್ರಿಕೆಟ್ ಆಡುವ ವಿಚಾರಕ್ಕೆ ಗಲಾಟೆಯಾಗಿದೆ.ಇದೇ ವಿಚಾರವಾಗಿ ಪರಸ್ಪರ ಬೈದಾಡಿಕೊಂಡಿದ್ದಾರೆ.ಜೀವನ್ ರಮೇಶ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಅಂತಾ ಕೆಲವರು ರಮೇಶ್ ಬಳಿ ಹೇಳಿಕೊಂಡಿದ್ದಾರೆ .ಇದರಿಂದ ಕೆರಳಿದ್ದ ರಮೇಶ್ , ಆಗಸ್ಟ್ 9 ರ ರಾತ್ರಿ ಟೀಂ ಕಟ್ಟಿಕೊಂಡು ಹರಳೂರು ರಸ್ತೆಯಲ್ಲಿರುವ ಆಂಬೂರ್ ದಮ್ ಬಿರಿಯಾನಿ ಹೋಟೆಲ್ ಬಳಿ ಬಂದಿದ್ದ.ಬಂದವನೇ 9 ಗಂಟೆಗೆ ಜೀವನ್ ಗೆ ಕರೆ‌ ಮಾಡಿ ಮಾತಾಡಬೇಕು ಬಾ ಅಂತಾ ಕರೆಸಿಕೊಂಡಿದ್ದ.ಹೀಗೆ ಜೊತೆಗೆ ಬಂದ ಸಹೋದರರ ಮೇಲೆ ಏಕಾ ಏಕಿ ಹಲ್ಲೆಗೆ ಮುಂದಾಗಿದ್ದಾರೆ.ಎಗ್ ರೈಸ್ ಅಂಗಡಿಯಲ್ಲಿದ್ದ ನೀರಿನ ಕ್ಯಾನ್,ಸೌಟ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಬೆಳ್ಳಂದೂರು ಠಾಣೆ ಪೊಲೀಸರು ಆರೋಪಿಗಳಾದ ರಮೇಶ್,ಯಶ್ವಂತ್,ಪವನ್ ಎಂಬುವವರನ್ನ ಬಂಧಿಸಿದ್ದು ಉಳಿದವರಿಗಾಗಿ ತಲಾಶ್ ನಡೆಸಲಾಗ್ತಿದೆ.ಅದೇನೇ ಹೇಳಿ‌ ಸ್ನೇಹಿತರು ಅಂದ ಮೇಲೆ ಸಣ್ಷ ಪುಟ್ಟ ಗಲಾಟೆ ಇದ್ದಿದ್ದೆ.ಆದ್ರೆ ಹಲ್ಲೆ ಮಾಡೊ ಹಂತಕ್ಕೆ ಹೋಗಿದ್ದು ನಿಜಕ್ಕೂ ದುರಂತ.ಮಾಡಿತ ತಪ್ಪಿಗೆ ಆರೋಪಿಗಳು ಕೊಲೆಯತ್ನ ಕೇಸ್ ಸಂಬಂಧ ಜೈಲು ಸೇರಿದ್ದಾರೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಮಾಚಲ ಮೇಘಸ್ಫೋಟದ ವೇಳೆ ಗರ್ಭಿಣಿ ಶಿಕ್ಷಕರನ್ನು ಹೊತ್ತೊಯ್ದ ವಿದ್ಯಾರ್ಥಿಗಳು, ಭಾರೀ ಮೆಚ್ಚುಗೆ

ನೈಜರ್‌ ಭಯೋತ್ಪಾದಕ ದಾಳಿ, ಇಬ್ಬರು ಭಾರತೀಯರು ಸಾವು, ಒಬ್ಬರ ಕಿಡ್ನ್ಯಾಪ್‌

ರೊಹಿಂಗ್ಯಾಗಳ ತಪಾಸಣೆಗೆ ಬಂದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಸಾಧನಾ ಸಮಾವೇಶ ಮುಗಿಸಿ ವಾ‍ಪಾಸ್ಸಾಗುತ್ತಿದ್ದ ಡಿಕೆ ಶಿವಕುಮಾರ್ ಬೆಂಗಾವಲು ವಾಹನ ಪಲ್ಟಿ, 4ಗಾಯ

ಸಿದ್ದರಾಮಯ್ಯನವರ ಹೆಸರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ:ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments