Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ರಸ್ತೆ ಅದ್ವಾನ ಕುರಿತು ಕಿರಣ್ ಮಜುಂದಾರ್ ಆಕ್ರೋಶ: ಸಚಿವ ಪಾಟೀಲ್‌ ತಿರುಗೇಟು

Businessman Kiran Majumdar Shah, Bangalore Road, Chief Minister Siddaramaiah

Sampriya

ಬೆಂಗಳೂರು , ಮಂಗಳವಾರ, 14 ಅಕ್ಟೋಬರ್ 2025 (14:20 IST)
Photo Credit X
ಬೆಂಗಳೂರು: ಬೆಂಗಳೂರಿನ ರಸ್ತೆಯ ಅದ್ವಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಉದ್ಯಮಿಗಳ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸಿದ್ಧವಾಗುತ್ತಿದೆ. ನಗರದ ರಸ್ತೆ ಗುಂಡಿ ಬಗ್ಗೆ  ಉದ್ಯಮಿ ಕಿರಣ್ ಮಜುಂದಾರ್ ಶಾ ಕಿಡಿಕಾರಿದ್ದಾರೆ.

ಬೆಂಗಳೂರಿನ ಹದಗೆಟ್ಟ ರಸ್ತೆ ಗುಂಡಿ, ಕಸ ಅದ್ವಾನ ಸಂಬಂಧಪಟ್ಟಂತೆ ಕಿರಣ್ ಮಜುಂದಾರ್ ಶಾ ವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅದ್ವಾನದ ಬಗ್ಗೆ ಚೀನಾ ಉದ್ಯಮಿಯೊಬ್ಬರು ಕೇಳಿದ ಪ್ರಶ್ನೆಗಳನ್ನ ಉಲ್ಲೇಖಿಸಿ ಸರ್ಕಾರದ ವಿರುದ್ಧ ಎಕ್ಸ್ ಖಾತೆ ಮೂಲಕ ಸರ್ಕಾರವನ್ನು ಟೀಕಿಸಿದ್ದಾರೆ.

ಬೆಂಗಳೂರಿನ ಬಯೋಕಾನ್ ಪಾರ್ಕ್‌ಗೆ ಚೀನಾದಿಂದ ವಿದೇಶಿ ಉದ್ಯಮಿಯೊಬ್ಬರು ಭೇಟಿ ನೀಡಿದ್ದರು. ಈ ವೇಳೆ ಹದಗೆಟ್ಟ ರಸ್ತೆ, ಕಸದ ಬಗ್ಗೆ ನನ್ನ ಪ್ರಶ್ನಿಸಿದ್ರು. ರಸ್ತೆಗಳು ಏಕೆ ಇಷ್ಟು ಕೆಟ್ಟದಾಗಿವೆ? ಇಷ್ಟೊಂದು ಕಸ ಏಕೆ ಇದೆ? ಹೂಡಿಕೆಯನ್ನು ಬೆಂಬಲಿಸಲು ಸರ್ಕಾರ ಬಯಸುವುದಿಲ್ಲವೇ? ಉತ್ತಮ ಗಾಳಿ ಇರುವ ಭಾರತವು ಏಕೆ ಕ್ರಮವನ್ನು ಕೈಗೊಳ್ಳುತ್ತಿಲ್ಲ? ಅಂತಾ ಪ್ರಶ್ನಿಸಿದರೆಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ 1,000 ಕೋಟಿ ವೆಚ್ಚದಲ್ಲಿ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಮಜಂದೂರ್ ಶಾ ಈ ಮಾತು ಆಡುವ ಅವಶ್ಯಕತೆ ಇರಲಿಲ್ಲ. ಪದೇ ಪದೇ ಮಾತಾಡ್ತಿರುವ ಉದ್ದೇಶ ಆದರೂ ಏನು? ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್‌ಗೆ ಸಚಿವ ಎಂಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   


Share this Story:

Follow Webdunia kannada

ಮುಂದಿನ ಸುದ್ದಿ

ಹೃದಯಾಘಾತದ ನೋವು, ಗ್ಯಾಸ್ಟ್ರಿಕ್ ನೋವಿಗಿರುವುದು ಇದೊಂದೇ ಸಣ್ಣ ಅಂತರ: ಡಾ ಸಿಎನ್ ಮಂಜುನಾಥ್ ಟಿಪ್ಸ್