Select Your Language

Notifications

webdunia
webdunia
webdunia
webdunia

ಕಿಡ್ನಾಪ್‌ ಆದ ಸಂತ್ರಸ್ತೆ ರೇವಣ್ಣ ಆಪ್ತನ ಮನೆಯಲ್ಲಿ ಪತ್ತೆ, ಬೆಂಗಳೂರಿಗೆ ಕರೆತರುತ್ತಿರುವ ಎಸ್‌ಐಟಿ

H D Revanna

Sampriya

ಹುಣಸೂರು , ಶನಿವಾರ, 4 ಮೇ 2024 (18:12 IST)
Photo Courtesy X
ಹುಣಸೂರು: ಎಚ್‌ಡಿ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿ ನಾಪತ್ತೆಯಾಗಿದ್ದ ಮಹಿಳೆ ಮೈಸೂರಿನ ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ತೆಯನ್ನು ಎಸ್ಐಟಿ ಅಧಿಕಾರಿಗಳು ರಕ್ಷಿಸಿದ್ದಾರೆ.

ಏಪ್ರಿಲ್ 29ರಂದು ಎಚ್ ಡಿ ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಎಂಬುವರು ಸಂತ್ರಸ್ತೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದು, ಆಕೆಯನ್ನು ರೇವಣ್ಣ ಅವರ ಆಪ್ತ ರಾಜಗೋಪಾಲನ ಮನೆಯಲ್ಲಿ ಕೂಡಿಹಾಕಲಾಗಿತ್ತು.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಸಂತ್ರಸ್ತೆಯ ಮಗ ಪೊಲೀಸ್ ಠಾಣೆಗೆ ದೂರು ನೀಡಿ,  ನನ್ನ ತಾಯಿಯನ್ನ ಅಪಹರಿಸಲಾಗಿದೆ ಎಂದು ಆರೋಪಿಸಿ ಶಾಸಕ ಹೆಚ್ ಡಿ ರೇವಣ್ಣ ಮತ್ತು ಸುರೇಶ್ ಬಾಬು ಎಂಬುವವರ ವಿರುದ್ದ ಕೆಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಎಫ್ ಐಆರ್ ದಾಖಲಾಗಿತ್ತು.

ಇದೀಗ ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.  ಇನ್ನೂ ಸಂತ್ರಸ್ತೆ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್ ಡಿ ರೇವಣ್ಣ 1ನೇ ಆರೋಪಿಯಾಗಿದ್ದಾರೆ. ಇನ್ನು 2ನೇ ಆರೋಪಿಯಾಗಿರುವ ಸತೀಶ್ ಬಾಬುಗೆ ಕೆ.ಆರ್ ನಗರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನ ಪ್ರಕಟವಾಗಲಿದೆ ಎಸ್ಸೆಸ್ಸೆಲ್ಸಿ ರಿಸಲ್ಟ್, ಇಲ್ಲಿದೆ ಡೀಟೈಲ್ಸ್