Select Your Language

Notifications

webdunia
webdunia
webdunia
webdunia

ಸಂತ್ರಸ್ತೆ ಕಿಡ್ನಾಪ್: ಎ2 ಆರೋಪಿ ಸತೀಶ್‌ ಬಾಬು 8 ದಿನ ಎಸ್‌ಐಟಿ ಕಸ್ಟಡಿಗೆ

ಸಂತ್ರಸ್ತೆ ಕಿಡ್ನಾಪ್: ಎ2 ಆರೋಪಿ ಸತೀಶ್‌ ಬಾಬು 8 ದಿನ ಎಸ್‌ಐಟಿ ಕಸ್ಟಡಿಗೆ

Sampriya

ಬೆಂಗಳೂರು , ಸೋಮವಾರ, 6 ಮೇ 2024 (17:11 IST)
Photo Courtesy X
ಬೆಂಗಳೂರು: ರೇವಣ್ಣ ವಿರುದ್ಧ ದೂರು ನೀಡಿದ ಸಂತ್ರಸ್ತೆಯ ಅ‍ಪಹರಣ ಪ್ರಕರಣದ ಸಂಬಂಧ  ಎ2 ಆರೋಪಿ ಸತೀಶ್ ಬಾಬು ಯಾನೆ ಬಾಬಣ್ಣನನ್ನು ಎಸ್‍ಐಟಿ ಅಧಿಕಾರಿಗಳು 8 ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಅಪಹರಣ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ತನಿಖಾ ತಂಡ  ಅಧಿಕಾರಿಗಳು ನ್ಯಾ ರವೀಂದ್ರಕುಮಾರ್ ಕಟ್ಟಿಮನಿ ಅವರ ಮುಂದೆ ಸತೀಶ್ ಬಾಬು ಅವರನ್ನು ಹಾಜರುಪಡಿಸಿದರು.‌‌

ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಹೆಚ್.ಡಿ.ರೇವಣ್ಣರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಈ ನಡುವೆ  2ನೇ ಆರೋಪಿ ಸತೀಶ್ ಬಾಬುವನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ, ಇಂದು ಬೆಂಗಳೂರಿನ 17ನೇ ಎಸಿಎಂಎಂಕೋರ್ಟ್ ಗೆ ಹಾಜರುಪಡಿಸಿದ್ದರು.

ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ನ್ಯಾಯಾಧೀಶರು, ಸತೀಶ್ ಬಾಬು ಅವರನ್ನು 8 ದಿನಗಳ ಕಾಲ ಎಸ್‍ಐಟಿ ವಶಕ್ಕೆ ಒಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಡಿಕಲ್ ಸೀಟು ಹಂಚಿಕೆ: ಖರ್ಗೆ ಅಳಿಯನ ವಿರುದ್ಧ 800 ಕೋಟಿ ರೂ. ಹಗರಣ ಆರೋಪ