ಕಾಲ್ ಗರ್ಲ್ ಆಗಿ ಬಂದವಳು ಕಿಡ್ನ್ಯಾಪರ್ ಆದ ಕಥೆ ಇದು.ಅತಿಯಾಸೆಗೆ ಬಿದ್ದಿದ್ದ ಯುವತಿ ತನ್ನದೇ ಗಿರಾಕಿಯನ್ನ ಅಪಹರಿಸಿದ್ದಳು. ಬೇರೆಯದ್ದೇ ಪ್ರಕರಣ ಎಂದುಕೊಂಡಿದ್ದ ಕಥೆಗೆ ಬೇರೆಯದ್ದೇ ಟ್ವಿಸ್ಟ್ ಸಿಕ್ಕಿದೆ. ಯಸ್ ಕಾಲ್ ಗರ್ಲ್ ಆ್ಯಂನಡ್ ಗ್ಯಾಂಗ್ ಈಗ ಅಂದರ್. ಪ್ರಿಯಾ , ತಿರುಮಲೇಶ್ , ನವೀನ್ , ಕೆಂಪರಾಜ್ , ಮುಖೇಶ, ಮಂಜುನಾಥ್ , ಭರತ್ ಮತ್ತು ದಲ್ಪೀರ್ ಸಾಹುದ್. ಇಷ್ಟೂ ಜನರ ಗ್ಯಾಂಗ್ ರಜನಿಕಾಂತ್ ಎಂಬಾತನನ್ನ ಕಿಡ್ನ್ಯಾಪ್ ಮಾಡಿತ್ತು. ಐದು ಲಕ್ಷ ಕೊಡದಿದ್ದರೆ ಹೆಣವೂ ಸಿಗೋದಿಲ್ಲ ಎಂದು ಧಮ್ಕಿ ಬೇರೆ ಹಾಕಿದ್ರು. ರಜನಿಕಾಂತ್ ಜೊತೆ ಯುವತಿ ಕೂಡ ಕಿಡ್ನ್ಯಾಪ್ ಆಗಿದ್ದಾರೆಮದು ನಂಬಿ ಪೊಲೀಸರು ನಿರಂತರ ಹುಡುಕಾಟ ನಡೆಸಿದಾಗ ಮಂಡ್ಯದ ಬಳಿ ಸಿಕ್ಕಿಬಿದ್ದರು. ಖಡಕ್ಕಾಗಿ ವಿಚಾರಣೆ ನಡೆಸಿದಾಗ ಸಿಕ್ಕಿಬಿದ್ದವರು ಬೊಟ್ಟು ಮಾಡಿ ತೋರಿಸಿದ್ದು, ಪ್ರಮುಖ ಆರೋಪಿತೆ ಪ್ರಿಯ ಕಡೆಗೆ.
ಮಂಜುನಾಥ್ ಆ್ಯಪ್ ಆಧಾರಿತ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. ಈತನಿಗೆ ಆಪ್ತ ಸ್ನೇಹಿತನಾಗಿರುವವನೇ ರಜನಿಕಾಂತ್ . ಈ ರಜನಿಕಾಂತ್ ಹಾಗು ಮಂಜುನಾಥ್ ಇಬ್ಬರು ಸೇರಿ ಯುವತಿಯೊಬ್ಬಳನ್ನ ಬುಕ್ ಮಾಡಿದ್ದರು.ಆಕೆಗೆ ಪಿಕಪ್ ಪಾಯಿಂಟ್ ತಿಳಿಸಿ ಟೈಮಿಂಗ್ ಹೇಲಿಟ್ಟಿದ್ದರು. ಅದಕ್ಕೂ ಮುನ್ನ ಕಂಠ ಮಟ್ಟ ಕುಡಿದು ತಮ್ಮದೇ ಕ್ಯಾಬ್ನಲ್ಲಿ ಕೆಂಗೇರಿಯಲ್ಲಿ ಯುವತಿಯನ್ನ ಪಿಕ್ ಮಾಡಿ ರಜನಿಕಾಂತ್ ನ ಮನೆ ಬಳಿ ಇರುವ ದೇವರಚಿಕ್ಕನಹಳ್ಳಿಗೆ ಬಂದು ಅದೇ ದಿನ 11-30 ರ ಸಂಧರ್ಭದಲ್ಲಿ ಓಯೋ ರೂಂನಲ್ಲಿ ಕಾಲ ಕಳೆದಿದ್ದಾರೆ. ಸುಮಾರು ತಡರಾತ್ರಿ 1-30 ರ ಬಳಿಕ ಯುವತಿಯನ್ನ ಡ್ರಾಪ್ ಮಾಡುವ ಸಲುವಾಗಿ ತಮ್ಮ ಕ್ಯಾಬ್ನಲ್ಲಿ ದೇವರ ಚಿಕ್ಕನಹಳ್ಳಿ ಬಳಿ ತೆರಳುತ್ತಿದ್ದಂತೆ ಡಿಯೋ ಬೈಕ್ ಬಂದ ನಾಲ್ವರು ಕಾರನ್ನು ಅಡ್ಡ ಹಾಕಿದ್ದಾರೆ. ಗಾಡಿಗೆ ಗುದ್ದಿದ್ಯಾ ಎಂದು ಹೇಳಿ ಅವಾಚ್ಯ ಶಭ್ಧಗಳಿಂದ ನಿಂದಿಸಿ ಅದೇ ಕಾರಿನಲ್ಲಿ ಬಲವಂತವಾಗಿ ಹತ್ತಿಕೊಂಡು ಹೋಗುವ ಸಂಧರ್ಬದಲ್ಲಿ ಮಂಜುನಾಥ್ ಕೋಳಿಫಾರಂ ಸರ್ಕಲ್ ಬಳಿ ಕಾರಿನಿಂದ ಜಿಗಿದಿದ್ದಾನೆ. ನಂತರ ಇನ್ನೋವಾ ಕಾರ್ ಡ್ರೈವರ್ ಬಳಿ ಮೊಬೈಲ್ ತೆಗೆದುಕೊಂಡು ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದ. ಇತ್ತ ಮಂಜುನಾಥ್ ಜಿಗಿಯುತ್ತಿದ್ದಂತೆ ಅದೇ ಕ್ಯಾಬಿನಲ್ಲಿ ರಜನಿಕಾಂತ್ ಹಾಗು ಯುವತಿಯನ್ನ ಕೂರಿಸಿಕೊಮಡು ಎಸ್ಕೇಪ್ ಆಗಿದ್ದಾರೆ. ಇತ್ತ ಅನ್ಯಾಯವಾಗಿ ತನ್ನ ಸ್ನೇಹಿತನ ಜೊತೆ ಯುವತಿ ಕೂಡ ಕಿಡ್ನ್ಯಾಪ್ ಆಗಿದ್ದಾಳಲ್ಲ ಎಂದು ಮಂಜುನಾಥ್ ಕೊರಗುತ್ತಿದ್ದರೆ ಅತ್ತ ಕಿಡ್ನ್ಯಾಪ್ ನ ಹಿಂದಿನ ಕೈ ಆ ಯುವತಿಯದ್ದೆ ಎಂದು ಬಂಧನದ ಬಳಿಕ ತಿಳಿದುಬಂದಿದೆ. ಯಸ್ ಪ್ರಕರಣ ವಿಚಾರಣೆ ನಡೆಸಿದಾಗ ಮಂಜುನಾಥ್ ಹಾಗು ರಜನಿಕಾಂತ್ ಇಬ್ಬರ ಜೊತೆ ಇದ್ದಾಗಲೇ ಯುವತಿ ಒಯೋ ರೂಂನ ಲೊಕೇಷನ್ ತನ್ನ ಗ್ಯಾಂಗ್ಗೆ ಸೆಂಡ್ ಮಾಡಿದ್ದಳು. ನಂತರ ಫಾಲೋ ಮಾಡಿದ್ದ ಆಕೆಯ ಗ್ಯಾಂಗ್ ಇಬ್ಬರನ್ನೂ ಕಿಡ್ನ್ಯಾಪ್ ಮಾಡುವ ಉದ್ದೇಶ ಹೊಂದಿತ್ತು. ಆದ್ರೆ ಮಂಜುನಾಥ್ ಎಸ್ಕೇಪ್ ಆದ ಹಿನ್ನಲೆ ರಜನಿಕಾಂತ್ನನ್ನ ಕಿಡ್ನ್ಯಾಪ್ ಮಾಡಿ ಐದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇನ್ನು ಈ ಗ್ಯಾಂಗ್ನ ಕೃತ್ಯ ಇದು ಮೊದಲೇನಲ್ಲಿ ಈ ಹಿಂದೆ ಕೂಡ ಮೂರು ಇಂತಹ ಕೃತ್ಯಗಳನ್ನ ನಡೆಸಿರುವುದು ಬೆಳಕಿಗೆ ಬಂದಿದೆ .
ಇನ್ನು ಕೆಲವೊಂದು ಸೆಕ್ಷುವಲ್ ಸರ್ವಿಸ್ ಗಳನ್ನ ಕಾಂಟಾಕ್ಟ್ ಮಾಡಿದಾಗ ಇಂತಹ ಘಟನೆಗಳು ನಡೆಯುವುದು ಸಹಜ. ಇಲ್ಲಿ ಕೃತ್ಯದ ಬಗ್ಗೆ ಹೇಳೋದಕ್ಕೂ ಮುಜುಗರ ಪಡುವಂತಹ ವಿಚಾರವಾದ್ದರಿಂದ ಹೆಚ್ಚು ಜನ ದುರು ಕೊಡಲು ಹೋಗೊದಿಲ್ಲ ಎಂಬುದನ್ನ ಅರಿತಿರುವ ಆರೋಪಿಗಳು ಈ ರೀತಿಯ ಕೃತ್ಯಕ್ಕೆ ಮುಂದಾಗ್ತಾರೆ. ಸದ್ಯ ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .