Select Your Language

Notifications

webdunia
webdunia
webdunia
webdunia

ಸಾಲ ಮರಳಿಸದಿದ್ದಕ್ಕೆ ಮಗುವನ್ನು ಅಪಹರಿಸಿದ್ರು…!

webdunia
ಭದ್ರಾವತಿ , ಭಾನುವಾರ, 14 ಅಕ್ಟೋಬರ್ 2018 (15:39 IST)
ಸಾಲ ಹಿಂತಿರುಗಿಸದ್ದಿದ್ದಕ್ಕೆ ಮಗುವನ್ನು ಕಿಡ್ನಾಪ್ ಮಾಡಿದ ಘಟನೆ ನಡೆದಿದೆ.

ಭದ್ರಾವತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಐದು ದಿನಗಳ ಹಿಂದೆ ಒಂಬತ್ತು ತಿಂಗಳ ಮಗುವನ್ನು ಹೊತ್ತೊಯ್ಯದ ಚಂದ್ರ ಮೋಹನ್ ಎಂಬ ಅಸಾಮಿ, ತಾನು ಕೊಟ್ಟ ಸಾಲ ಮರಳಿಸದ ಕಾರಣ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಆನೇಕಲ್ ನ ಕಿತ್ತಾಗನಹಳ್ಳಿ ಯಲ್ಲಿ ವಾಸವಿದ್ದ ಕುಟುಂಬವನ್ನು ಭದ್ರಾವತಿಗೆ ಕರೆಸಿಕೊಂಡು ಮಗುವನ್ನು ಹೊತ್ತೊಯ್ಯದ ವ್ಯಕ್ತಿ ಪರಾರಿಯಾಗಿದ್ದಾನೆ.

ಚಂದ್ರ ಮೋಹನ್  ಎಂಬಾತನ ಬಳಿ ವಿನಾಯಕ್ ಎಂಬಾತ ಸಾಲ ಪಡೆದಿದ್ದನು. ಮಗುವಿನ ಚಿಕಿತ್ಸೆಗೆಂದು ಒಂದು ವರ್ಷದ ಹಿಂದೆ ಮೂವತ್ತು ಸಾವಿರ ರೂ.ಗಳಷ್ಟು ವಿನಾಯಕ ಸಾಲ ಮಾಡಿದ್ದನು. ವಿನಾಯಕ್ ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದವನಾಗಿದ್ದಾನೆ.

ಹಣವನ್ನು ಹಿಂತಿರುಗಿಸಲು ಕಾಲಾವಕಾಶ ಕೇಳಿದರೂ, ಕೇಳದೇ ಮಗುವನ್ನು ಅಪಹರಣ ಮಾಡಲಾಗಿದೆ. ಭದ್ರಾವತಿಗೆ ಬಂದು ಹಣವನ್ನು ಹಿಂತಿರುಗಿಸಿ ಮಗುವನ್ನು ತೆಗೆದುಕೊಂಡು ಹೋಗುವಂತೆ ಧಮ್ಕಿ ಹಾಕಲಾಗಿದೆ ಎಂದು ವಿನಾಯಕ್ ದಂಪತಿ ದೂರು ನೀಡಿದ್ದಾರೆ. ಸೂರ್ಯ ಸಿಟಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ಹೇಳಿದ್ದೇನು ಗೊತ್ತಾ?