Webdunia - Bharat's app for daily news and videos

Install App

ಕಾರ್ಕಳದ ಪ್ರತಿಮಾ ಗಂಡ ಬಾಲಕೃಷ್ಣ ಹತ್ಯೆಗೆ ಮಾಡಿದ್ದ ಖತರ್ನಾಕ್ ಪ್ಲ್ಯಾನ್ ರಿವೀಲ್

Sampriya
ಭಾನುವಾರ, 27 ಅಕ್ಟೋಬರ್ 2024 (12:25 IST)
Photo Courtesy X
ಉಡುಪಿ:  ತನ್ನ ಪ್ರೀತಿಗೆ ಅಡ್ಡಿಯಾಗುತಿದ್ದ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆಗೈಯಲು ಅ.20 ರಾತ್ರಿ 2 ಗಂಟೆಗೆ ಪ್ರತಿಮಾ ತನ್ನ  ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಮನೆಗೆ ಕರೆಸಿ ಪತಿಗೆ ತಿಳಿಯಬಾರದೆಂದು ಬಾತ್ ರೂಂನಲ್ಲಿ ಬಚ್ಚಿಟ್ಟಿದ್ದಳು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಿಲೀಪ್ ಹೆಗ್ಡೆಯನ್ನು ಅಜೆಕಾರು ಪೋಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.  ಪ್ರತಿಮಾಳನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನದ ಕಳುಹಿಸಲಾಗಿದೆ. ಕಂಬಿ ಹಿಂದೆ ಸೇರುವ ಮೊದಲೇ ಪತ್ನಿ ಪ್ರತಿಮಾ ತನ್ನ ಖತರ್ನಾಕ್‌ ಪ್ಲ್ಯಾನ್‌ ಬಗ್ಗೆ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಬೆಂಗಳೂರಿನಿಂದ ಆಸ್ಪತ್ರೆಯಿಂದ ಕರೆದುಕೊಂಡು ಬಂದಿದ್ದ ಬಾಲಕೃಷ್ಣ ಅವರನ್ನು ನೋಡಲು ಸಂಬಂಧಿಕರು ದೆಪ್ಪುತ್ತೆಯ ತನ್ನ ಮನೆಗೆ ಜಮಾಯಿಸಿದ್ದರು. ಇದೇ ವೇಳೆ ಪ್ರತಿಮಾ ತನ್ನ ಸಂಬಂಧಿಕರನ್ನು ಹಾಗೂ ತನ್ನ ಅಣ್ಣನನ್ನು ಕೂಡ ಬೇರೆ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಳು. ತನ್ನ ಮಕ್ಕಳನ್ನು ಕೂಡ ದಸರಾ ರಜೆಯ ಸಂದರ್ಭದಲ್ಲಿ ಮಾನಜೆ ಎಂಬಲ್ಲಿ ತನ್ನ ಅಜ್ಜಿಮನೆಗೆ ಕಳುಹಿಸಿದ್ದಳು ಪ್ರತಿಮಾ.

ತನ್ನ ಪ್ರೀತಿಗೆ ಅಡ್ಡಿಯಾಗುತಿದ್ದ ಪತಿ ಬಾಲಕೃಷ್ಣ ಪೂಜಾರಿಯನ್ನು ಕೊಲೆಗೈಯಲು ಅ.20 ರಾತ್ರಿ 2 ಘಂಟೆಯ ವೇಳೆಯಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಮನೆಗೆ ಕರೆಸಿ ಪತಿಗೆ ತಿಳಿಯಬಾರದೆಂದು ಬಾತ್ ರೂಂನಲ್ಲಿ ಬಚ್ಚಿಟ್ಟಿದ್ದಳು. ಗಾಢ ನಿದ್ರೆಯಲ್ಲಿದ್ದ ಬಾಲಕೃಷ್ಣ 2.30 ರ ವೇಳೆ ಅವರನ್ನು ದಿಲೀಪ್ ಹೆಗ್ಡೆ ಬೆಡ್ಶೀಟ್ ನಲ್ಲಿ ಉಸಿರು ಗಟ್ಟಿಸಿ , ಪತ್ನಿ ಪ್ರತಿಮಾ ತನ್ನ ಗಂಡನ ಎದೆ‌ಮೇಲೆ ಹಾಗೂ ಕಾಲನ್ನು ಒದ್ದಾಡದಂತೆ ಅದುಮಿಟ್ಟು ಕೊಲೆ ಮಾಡಿದ್ದಳು. ನಂತರ ಕೊಲೆ ಮಾಡಿ ದಿಲೀಪ್ ಹೆಗ್ಡೆ ಮನೆಯಿಂದ ಕಾಲ್ಕಿತ್ತಿದ್ದನು ಎಂಬ ಮಾಹಿತಿ ಹೊರಬಿದ್ದಿದೆ.

ಮೃತ ಬಾಲಕೃಷ್ಣ ಅವರ ಶವದ ಮೇಲೆ ತುಟಿಯ ಭಾಗ ಹಾಗೂ ಗಲ್ಲದ ಭಾಗಗಳಲ್ಲಿ ಉಗುರಿನ ಗುರುತುಗಳಿದ್ದು ಮೂಗಿನ ಭಾಗ ಕೆಂಪಗಾಗಿತ್ತು. ಇದರಿಂದ ಅನುಮಾನಗೊಂಡ ಸುರೇಖಾ ಅವರ ಅಣ್ಣ ಸಂದೀಪ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ಮೃತಪಟ್ಟ ಬಾಲಕೃಷ್ಣಗೆ ಪತ್ನಿಯ ಅಕ್ರಮ ಸಂಬಂಧಗಳು ಕೈಗಂಟಾಗಿತ್ತು. ರೀಲ್ಸ್ ಗಳ ಮೂಲಕ ವೈರಲ್ ಅಗಿದ್ದ ಪ್ರತಿಮಾ ಇನ್ಟಾಗ್ರಾಮ್ ಮೂಲಕವೇ ಪ್ರೇಮದ ಆಫರ್‌ಗಳು ಬಂದಿದ್ದವು. ಕಳೆದ ಒಂದುವರೆ ವರ್ಷಗಳ ಹಿಂದೆ ಮುಂಬೈ ಯುವಕನ ಜೊತೆ ಸಲ್ಲಾಪದ ವೇಳೆ ತನ್ನ ಅಣ್ಣನ ಕೈಗೆ ಸಿಕ್ಕಿಬಿದ್ದು ದೈವದ ಎದುರು ಅಣೆ ಪ್ರಮಾಣವನ್ನು ಮಾಡಿದ್ದಳು. ಬಳಿಕ ಆ ಪ್ರೇಮ ಕೊನೆಯಾದ ಬಳಿಕ ದಿಲೀಪ್ ಹೆಗ್ಡೆ ಪರಿಚಯವಾಗಿ ಸಂಪರ್ಕ ಬೆಳೆಸಿದ್ದಳು. ಇದೇ ವಿಚಾರದಲ್ಲಿ ಬಾಲಕೃಷ್ಣ ಹಾಗು ಪತ್ನಿ ಪ್ರತಿಮಾ, ದಿಲೀಪ್ ಹೆಗ್ಡೆ ವಿರುದ್ಧ ಅಜೆಕಾರು ಪೋಲೀಸ್ ಠಾಣೆ ಮೆಟ್ಟಿಲೇರಿದ್ದರು.

ಗಣೇಶ ಚತುರ್ಥಿ ದಿನ ಆಹಾರದಲ್ಲಿ ವಿಷ ಪದಾರ್ಥ ಬಳಸಿ ಕೊಲೆಗೈಯಲು ಪ್ರಯತ್ನಿಸಿದ್ದಳು, ಬಳಿಕ ಪ್ರತಿನಿತ್ಯ ಅನ್ನಕ್ಕೆ ವಿಷಪದಾರ್ಥ ಬೆರೆಸಿ ಕೊಡುತಿದ್ದ ಪ್ರತಿಮಾ ಅನಾರೋಗ್ಯಕ್ಕಿಡಾದ ಪತಿ ಬಾಲಕೃಷ್ಣ ಕಿಡ್ನಿ ಲೀವರ್ ನರಗಳ ಸಂವೇದನೆ ಕಳೆದುಕೊಂಡಿದ್ದನು.

ಏಳಕ್ಕೂ ಹೆಚ್ಚು ಅಸ್ಪತ್ರೆಗಳಿಗೆ ದಾಖಲಿಸಿ ಸಾವಿನ ಕದ ತಟ್ಟಿ ಬದುಕುಳಿದಿದ್ದ ಬಾಲಕೃಷ್ಣ ಬೆಂಗಳೂರಿನಿಂದ ಅಜೆಕಾರಿನ ಮನೆಗೆ ಕರೆತರಲಾಗಿತ್ತು. ಮನೆಯಲ್ಲಿ ಪತ್ನಿ ಹಾಗು ಪ್ರಿಯಕರ ಜೊತೆ ಸೇರಿ ಕೊಲೆ‌ಮಾಡಿಸಿದ್ದಳು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments