Select Your Language

Notifications

webdunia
webdunia
webdunia
webdunia

ಖರ್ಗೆ ಹೇಳಿಕೆಯಿಂದ ಬಿಜೆಪಿಗೆ 2-3% ಮತ ಹೆಚ್ಚಳವಾಗಲಿದೆ : ಸುಧಾಕರ್

ಖರ್ಗೆ ಹೇಳಿಕೆಯಿಂದ ಬಿಜೆಪಿಗೆ 2-3% ಮತ ಹೆಚ್ಚಳವಾಗಲಿದೆ : ಸುಧಾಕರ್
ಚಿಕ್ಕಬಳ್ಳಾಪುರ , ಶನಿವಾರ, 29 ಏಪ್ರಿಲ್ 2023 (11:36 IST)
ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯಿಂದ ಬಿಜೆಪಿಗೆ ಲಾಭ ಆಗಲಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದರು.
 
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಖರ್ಗೆ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ 2 ರಿಂದ 3% ಮತ ಹೆಚ್ಚಳವಾಗಲಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಈ ರೀತಿ ಭಾಷೆ ಬಳಸೋದು ಸರಿ ಅಲ್ಲ.

130 ಕೋಟಿ ಭಾರತೀಯರನ್ನು ಅವರು ಅಪಮಾನ ಮಾಡಿದ್ದಾರೆ. ಮೋದಿಯವರು ವಿಶ್ವ ನಾಯಕರು. ಇದು ಖರ್ಗೆಯವರ ರಾಜಕೀಯ ದಿವಾಳಿತನ ವ್ಯಕ್ತಿತ್ವ ತೋರ್ಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ