Select Your Language

Notifications

webdunia
webdunia
webdunia
webdunia

ರಾಜ್ಯಸಭೆಗೆ ಖರ್ಗೆ, ಲೋಕಸಭಾ ಚುನಾವಣೆಗೆ ಅಳಿಯ ರಾಧಾಕೃಷ್ಣ ಸ್ಪರ್ಧೆ?

ರಾಜ್ಯಸಭೆಗೆ ಖರ್ಗೆ, ಲೋಕಸಭಾ ಚುನಾವಣೆಗೆ ಅಳಿಯ ರಾಧಾಕೃಷ್ಣ ಸ್ಪರ್ಧೆ?
ಕಲಬುರಗಿ , ಸೋಮವಾರ, 8 ಅಕ್ಟೋಬರ್ 2018 (15:58 IST)
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಖರ್ಗೆ ಅಳಿಯ ರಾಧಾಕೃಷ್ಣ ಅವರನ್ನು ಕಣಕ್ಕಿಳಿಸಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಆಯ್ಕೆ ಆಗುವ ಕುರಿತು ಅವರ ಕುಟುಂಬದಲ್ಲಿ ಚರ್ಚೆ ಆಗುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿವಾದಿತ ಹೇಳಿಕೆ ನೀಡಿದ್ದಾರೆ.

ದಲಿತ ಹಿರಿಯ ಮುಖಂಡ ಗುರುಶಾಂತ್ ಪಟ್ಟೇದಾರ್ ಕಲಬುರಗಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಖರ್ಗೆಯವರು ರಾಜ್ಯಸಭೆಗೆ ಆಯ್ಕೆ ಆಗುವ ಯೋಚನೆ ನಡೆಸಿದ್ದಾರೆ ಎಂದರು. ಖರ್ಗೆ ಅವರ ಅಧಿಕಾರಾವಧಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಉದ್ಯೋಗ ಸೃಷ್ಟಿ ಮಾಡಿಲ್ಲ. ಜಿಲ್ಲೆ ಈಗಲೂ ಹಿಂದುಳಿದ ಪ್ರದೇಶ ಆಗಿದೆ. ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಅಧಿಕಾರಿಗಳಿಗೆ ಒದೆಯುವುದಾಗಿ ಬೆದರಿಕೆ ಹಾಕಿದ್ದು ಅಧಿಕಾರಿಗಳು ಭೀತಿಗೆ ಒಳಗಾಗಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಖರ್ಗೆ ಅವರ ವಿರೋಧಿ ಅಲೆ ಇದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಉತ್ತರ  ಕ್ಷೇತ್ರದಲ್ಲಿ ದಿ. ಖಮರುಲ್ ಇಸ್ಲಾಮ್ ಅವರ ಪತ್ನಿ  ಖನೀಜ್ ಫಾತಿಮಾ ಅವರು ಶಾಸಕಿಯಾಗಿ ಆಯ್ಕೆ ಆದರೂ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರು ಅಸಮಾಧಾನ ಹೊಂದಿದ್ದಾರೆ. ಇನ್ನು ಕೋಲಿ ಕಬ್ಬಲಿಗ ಸಮಾಜದ ಶಾಸಕರಿಗೂ ಸಂಪುಟಕ್ಕೆ ಸೇರಿಸಿಲ್ಲ. ಹೀಗಾಗಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಖರ್ಗೆ ಅವರ ಕಾರ್ಯ ನಿರ್ವಹಣೆಗೆ ಬೇಸರಗೊಂಡಿದ್ದಾರೆ ಎಂದರು.
ಖರ್ಗೆ ಅವರಿಗೆ ವಯಸ್ಸಾಗಿದೆ. ಅವರು ರಾಜಕೀಯ ನಿವೃತ್ತಿ ಹೊಂದು ಹೊಸಬರಿಗೆ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಡಬೇಕು ಎಂದು ಅವರು ಆಗ್ರಹಿಸಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ 7 ರಂದು ಮಿಸ್ಟರ್ ಸೌಥ್ ಆಯ್ಕೆಗೆ ನಗರದಲ್ಲಿ ಮ್ಯಾನ್‌ಹಂಟ್